ಕೊಪ್ಪಳ | ಕ್ವಿಟ್ ಬಲ್ಡೋಟಾ ಪೂರ್ವಭಾವಿ ಸಭೆ
ಫೆ.7ರಂದು 100 ದಿನಗಳನ್ನು ಪೂರೈಸಲಿರುವ ಪ್ರತಿಭಟನೆ
ಕೊಪ್ಪಳ, ಜ.31: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಭಾಗ್ಯನಗರ ರೈಲ್ವೆ ಬ್ರಿಡ್ಜ್ ಸಮೀಪದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಇಂದು ಶತದಿನದ ಹೋರಾಟದ ಪೂರ್ವಭಾವಿ ಸಭೆ ನಡೆಯಿತು.
ಕಾರ್ಖಾನೆ ವಿರೋಧಿ ಹೋರಾಟ ಫೆ.7ರಂದು ಶತದಿನ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ಪಾಲ್ಗೊಂಡ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಒಮ್ಮತದ ತೀರ್ಮಾನ ತೆಗೆದುಕೊಂಡರು.
ಮಾಜಿ ತಾಪಂ ಅಧ್ಯಕ್ಷ ದಾನಪ್ಪ ಕವಲೂರ ಮಾತನಾಡಿ, ಇಲ್ಲಿರುವ ಒಂದೂವರೆ ಲಕ್ಷ ಜನರಲ್ಲಿ ಅರ್ಧದಷ್ಟು ಜನ ಕಾರ್ಖಾನೆಗಳ ಧೂಳು, ಹೊಗೆ, ಬೂದಿ ಬಾಧೆಗೆ ತುತ್ತಾಗಿದ್ದಾರೆ. 20 ಬಾಧಿತ ಹಳ್ಳಿಯ ಐವತ್ತು ಸಾವಿರ ಜನರು ಅನಾರೋಗ್ಯದ ಗಂಭೀರ ಸಮಸ್ಯೆಯಿಂದ ಸಾವಿನ ದವಡೆಗೆ ಸಿಲುಕಿದ್ದಾರೆ ಎಂದರು.
ಸಭೆಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಜಂಟಿ ಕ್ರಿಯಾ ಸಮಿತಿ ಪ್ರಮುಖರಾದ ಸಾಹಿತಿ ಎಚ್.ಎಸ್.ಪಾಟೀಲ್, ಡಿ.ಎಚ್. ಪೂಜಾರ, ಡಿ.ಎಂ.ಬಡಿಗೇರ, ಮಲ್ಲಿಕಾರ್ಜುನ ಬಿ.ಗೋನಾಳ, ಡಾ. ಮಂಜುನಾಥ ಸಜ್ಜನ್, ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಪೀರಾ ಹುಸೇನ್ ಹೊಸಳ್ಳಿ, ರಾಜು ಬಾಕಳೆ, ಸೌಮ್ಯ ನಾಲವಾಡ, ಮಾಲಾ ಬಡಿಗೇರ, ಸರೋಜಾ ಬಾಕಳೆ, ಶ್ವೇತಾ ಅಕ್ಕಿ, ವಿಜಯ ದೊರೆರಾಜು, ಹನುಮಂತರಾವ ವಕೀಲರು, ಬಾಳಪ್ಪ ವಕೀಲರು, ಶರಣು ಗಡ್ಡಿ, ನಟರಾಜ ಸವಡಿ, ಭೀಮಸೇನ ಕಲಕೇರಿ, ನಜೀರ್ ಸಾಬ್ ಮೂಲಿಮನಿ, ಎಂ.ಕೆ.ಸಾಹೇಬ್, ಕಾಶಪ್ಪ ಚಲುವಾದಿ, ಜ್ಯೋತಿ ಜಿ. ಕದ್ರಳ್ಳಿಮಠ ಮಾತನಾಡಿದರು. ಸಭೆಯಲ್ಲಿ ಸಾಹಿತಿ ಎ.ಎಂ. ಮದರಿ ಕಾವ್ಯಾ ಗಡಿದ್, ಸುನಂದಾ ಬಾರಕೇರ್, ಲತಾ ಉತ್ತಂಗಿಮಠ, ದ್ಯಾಮಣ್ಣ ಚಿಲವಾಡಗಿ, ರಾಜಶೇಖರ ಏಳುಬಾವಿ, ವಿದ್ಯಾ ನಾಲವಾಡ, ಶಿವಸಂಗಪ್ಪ ವಣಗೇರಿ, ಸುಜಾತಾ ಹಲಗೇರಿ, ಸಂಗಪ್ಪ ವಾರದ, ಜಿ.ಎಸ್.ಕಡೇಮನಿ, ಜಗದೀಶ ಕುಂಬಾರ, ಗಣೇಶ ವಿಶ್ವಕರ್ಮ, ಶಿವಣ್ಣ ದೆವರಮನಿ, ಗವಿಸಿದ್ದಪ್ಪ ಹಲಿಗಿ, ರಮೇಶ ಡಂಬ್ರಳ್ಳಿ, ಮಂಜು ಕೆಂಚನಗೌಡ್ರ, ಮಾರ್ಕಾಂಡೇಯ ಹಿರೇಮಠ, ರತ್ನಾಕರ್ ತಳವಾರ, ಶುಕರಾಜ ತಾಳಕೇರಿ, ಭೀಮಪ್ಪ ಹವಳಿ, ಈಶಪ್ಪ ದೊಡ್ಡಮನಿ, ಯಮನೂರಪ್ಪ ಹಳ್ಳಿಕೇರಿ, ಸದಾಶಿವ ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ.ರಾಜೂರು, ಸದಾಶಿವ ಪಾಟೀಲ್, ಬಿ.ಜಿ.ಕರಿಗಾರ, ನೂರಂದಪ್ಪ ಉಪ್ಪಿನ್, ಈಶ್ವರ ಕೊರ್ಲಹಳ್ಳಿ, ಜ್ಯೋತಿ ಮಟ್ಟಿ, ಜ್ಯೋತಿ ಜಿ.ಕೆ, ಉಮರ್ ಫಾರೂಕ್, ರುಕ್ಸಾನಾ ಎ.ಕೆ, ರಾಜೇಶ್ ಸಸಿಮಠ, ಮಂಗಳೇಶ ರಿಠೋಡ್, ಅನ್ನಪೂರ್ಣ ಮನ್ನಾಪೂರ, ಮೈತ್ರಾ ಜೆ, ಚಂದ್ರೇಗೌಡ ಪಾಟೀಲ್, ಹನುಮೇಶ ಕಾಲ್ಮಂಗಿ, ಗಾಳೆಪ್ಪ ಹೂವಿನಾಳ, ಸುರೇಶ್ ಪೂಜಾರ, ಪ್ರಕಾಶ ಹೊಳೆಯಪ್ಪನವರ, ಮಹಾದೇವಪ್ಪ ಮಾವಿನಮಾಡು ಭಾಗವಹಿಸಿದ್ದರು.
ಇದು ಸಾವು ಬದುಕಿನ ಹೋರಾಟವಾಗಿದೆ. ಕಾರ್ಖಾನೆಯ ಧೂಳಿನಿಂದ ಮಕ್ಕಳು ಗಂಭೀರ ಖಾಯಿಲೆಗೆ ತಾತ್ತಾಗುತ್ತಿದ್ದಾರೆ. ಯಾಕಾಗಿ ಬದುಕಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಈಗಿನ ಸಂದರ್ಭದಲ್ಲಿ ರೈತರ ಶವಯಾತ್ರೆ ಮಾಡುವುದು ಒಳ್ಳೆಯದು. ರಾಜಕಾರಣಿಗಳು ಯಾವುದನ್ನೂ ಕಳೆದುಕೊಳ್ಳುವುದು ಬೇಡ. ಸದ್ಯದ ಪರಿಸ್ಥಿತಿಯಲ್ಲಿ ಮನೆ ಬಾಗಿಲಿಗೆ ಸಾವು ಬಂದಂತಾಗಿದೆ.
-ಮಹೇಶ ವದ್ನಾಳ ಹಿರೇಬಗನಾಳ ರೈತ