×
Ad

ಕೊಪ್ಪಳ: ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಮೃತ್ಯು

Update: 2024-12-31 11:10 IST

ಕೊಪ್ಪಳ: ಆಟವಾಡಲು ತೆರಳಿದ್ದಾಗ ಬಾಲಕಿಯೊಬ್ಬಳು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಮೆತಗಲ್ ಗ್ರಾಮದಲ್ಲಿ ನಡೆದಿದೆ.

ಅಮೃತಾ ಶಿವಪುರ (11) ಮೃತ ಬಾಲಕಿ. ಎಳ್ಳು ಅಮಾವಾಸ್ಯೆ ಇದ್ದ ಕಾರಣ ಕುಟುಂಬದವರೆಲ್ಲರೂ ಸೇರಿ ಮೆತಗಲ್‌ ಗ್ರಾಮದ ಸೀಮೆಯ ನಾಗಮ್ಮ ಗಡಾದ ಅವರ ಜಮೀನಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಆಟವಾಡುತ್ತಾ ಹೋಗಿ ಕೃಷಿ ಹೊಂಡದಲ್ಲಿ ಮೂವರು ಮಕ್ಕಳು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಹೊಂಡಕ್ಕೆ ಬಿದ್ದ ಮಕ್ಕಳನ್ನು ರಕ್ಷಿಸಿದ್ದು, ಆಸ್ಪತ್ರೆಗೆ ರಾವನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News