×
Ad

ಕೊಪ್ಪಳ | ಅಂತರರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ ಉದ್ಘಾಟನೆ

Update: 2025-10-10 18:38 IST

ಕೊಪ್ಪಳ: ಶ್ರೀಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಿಂದ ಆಯೋಜಿಸಲಾಗಿದ್ದ ಗವಿದೀಪ್ತಿ-ಕೌಶಲ್ಯ ಭಾರತಿ 2.0 ಅಂತರರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣವನ್ನು ಉದ್ಘಾಟಿಸಲಾಯಿತು.

ಶುಕ್ರವಾರದಂದು ನಗರದ ಮಧುಶ್ರೀ ಗಾರ್ಡನ್‌ಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯಗಳ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್ ತಮ್ಮ ವೃತ್ತಿಯಲ್ಲಿ ಮೂತ್ರವಹ ರೋಗಗಳಿಗೆ ಮನೆಮದ್ದಿನಿಂದ ಹಿಡಿದು ಶಸ್ತ್ರ ಚಿಕಿತ್ಸೆಯವರೆಗೂ ಆಯುರ್ವೇದೋಕ್ತ ವಿಶಿಷ್ಟ ಚಿಕಿತ್ಸೆಗಳ ಮಹತ್ವವನ್ನು ತಮ್ಮ ದೀರ್ಘ ಅನುಭವಗಳನ್ನು ಹಂಚಿಕೊಂಡರು, ವೈದ್ಯರು ಆಯುರ್ವೇದ ಮೂಲಕ ಉತ್ತಮ ಚಿಕಿತ್ಸೆ ನೀಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಂತೇಶ ಸಾಲಿಮಠ ಅವರು ಮಾತನಾಡಿ, ಆಯುರ್ವೇದದ ಸಂಪೂರ್ಣ ಜ್ಞಾನದ ಜೊತೆಗೆ ಕೌಶಲ್ಯವನ್ನು ಕಲಿತರೆ ನಿಮ್ಮ ವೈದ್ಯವೃತ್ತಿಯಲ್ಲಿ ಯಶಸ್ಸನ್ನು ಕಾಣಬಹುದೆಂದು ಹೇಳಿದರು.

ಸಂಜಯ್ ಕೊತಬಾಳ ಮತ್ತು ಡಾ. ಅಶೋಕಕುಮಾರ ವಾರ್ಶ್ನೆ ಮಾತನಾಡಿದರು.

ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಶಾರದಮ್ಮ ಕೊತಬಾಳ ಬಿ.ಬಿ.ಎಂ ಕಾಲೇಜಿನ ನಿರ್ದೇಶಕರಾದ ಮಹೇಶ ಮುದುಗಲ್ ಇವರು ವಹಿಸಿಕೊಂಡಿದ್ದರು.

ಡಾ.ಗಿರೀಶ ಕೆ.ಜೆ., ಡಾ.ಕರುಣಾತಿಲಕೆ, ಡಾ.ಪ್ರತಿಮಾ ನಾಗೇಶ, ಡಾ.ಅನುಪಮಾ ವಿ., ಡಾ.ರವಿರಾಜ ಕಡ್ಲೆ ಹಾಗೂ ಡಾ. ಹೇಮಂತ ತೋಷಿಕಾನೆ ತಮ್ಮ ವಿಶೇಷ ಉಪನ್ಯಾಸ ಮಂಡನೆ ಮಾಡಿದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಡಾ.ಸಿದ್ದನಗೌಡ ಪಾಟೀಲ ನೇರವೇರಿಸಿದರು. ಉಪಪ್ರಾಂಶುಪಾಲರಾದ ಡಾ.ಸುರೇಶ ಹಕ್ಕಂಡಿ ವಂದನಾರ್ಪಣೆ ಸಲ್ಲಿಸಿದರು. ಡಾ.ಲಕ್ಷ್ಮಿ ಸಂಗಟಿ ಹಾಗೂ ಡಾ.ನೇಹಾ ಅವರು ನಿರೂಪಿಸಿದರು.

ವೇದಿಕೆಯ ಮೇಲೆ ಡಾ. ಪ್ರಸನ್ನ ಎನ್.ರಾವ್, ಡಾ.ಎ.ಎಸ್.ಪ್ರಶಾಂತ, ಡಾ.ಕೆ.ಬಿ.ಹಿರೇಮಠ, ಡಾ.ಎಸ್.ಕೆ.ಬನ್ನಿಗೋಳ, ಡಾ.ಗವಿಸಿದ್ದನಗೌಡ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News