×
Ad

ಕೊಪ್ಪಳ | ಅ.10, 11ರಂದು ಅಂತರರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ: ಡಾ.ಮಹಾಂತೇಶ್ ಸಾಲಿಮಠ

Update: 2025-10-07 19:23 IST

ಕೊಪ್ಪಳ : ಅ.10 ಮತ್ತು 11 ರಂದು ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ ಎಂದು ಡಾ.ಮಹಾಂತೇಶ ಸಾಲಿಮಠ ಅವರು ಹೇಳಿದರು.

ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,  ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮತ್ತು ಆರೋಗ್ಯ ಭಾರತಿ ಕರ್ನಾಟಕ ಉತ್ತರ (ರಿ) ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಈ ವಿಚಾರ ಸಂಕೀರ್ಣ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಪ್ರತಿಷ್ಠಿತ ಶೈಕ್ಷಣಿಕ ಸಭೆಯು ಆರೋಗ್ಯ ಭಾರತಿಯ ಪ್ರಮುಖ ಉಪಕ್ರಮವಾದ ಕೌಶಲ್ಯ ಭಾರತಿಯ ಭಾಗವಾಗಿದೆ. ಇದು ಆಯುರ್ವೇದ ಶಿಕ್ಷಣ, ವೈದ್ಯಕೀಯ ಕೌಶಲ್ಯಗಳು ಮತ್ತು ಸಂಶೋಧನೆಯಲ್ಲಿ ಶ್ರೇಷ್ಠತೆಯನ್ನು ಪೋಷಿಸಲು ಮೀಸಲಾಗಿರುವ ದೂರದೃಷ್ಟಿಯ ಚಳುವಳಿಯಾಗಿದೆ. ಜ್ಞಾನ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಐತಿಹಾಸಿಕ ಕೇಂದ್ರವಾದ ಶ್ರೀ ಗವಿಮಠದ ಆಶ್ರಯದಲ್ಲಿ, ಆಯೋಜಿಸುತ್ತಿದೆ ಜಾಗತಿಕ ಪ್ರಸ್ತುತತೆಗಾಗಿ ಆಯುರ್ವೇದವನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಛರಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಡಾ.ಎಸ್.ಎನ್.ಹಕ್ಕಂಡಿ, ಡಾ.ಸಿದ್ದನಗೌಡ ಪಾಟೀಲ್, ಡಾ.ಜಿ.ಜಿ.ಪಾಟೀಲ್, ಡಾ.ಶ್ರೀಧರ್, ಡಾ.ಅನಿತಾ, ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News