ಕೊಪ್ಪಳ | ಕೊಲೆಯಾದ ಗವಿಸಿದ್ದಪ್ಪ ನಾಯಕ ಮನೆಗೆ ಮುಸ್ಲಿಂ ಸಮುದಾಯದ ಮುಖಂಡರ ಭೇಟಿ
ಕೊಪ್ಪಳ: ಕೊಲೆಯಾದ ಗವಿಸಿದ್ದಪ್ಪ ನಾಯಕ್ ಅವರ ಮನೆಗೆ ಮುಸ್ಲಿಂ ಸಮುದಾಯದ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದರು.
ಗುರುವಾರ ಮೃತ ಯವಕನ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಮಾತನಾಡಿದ ಮುಖಂಡರು, ಈ ಕೃತ್ಯವನ್ನು ನಾವು ಖಂಡಿಸುತ್ತೇವೆ, ಯಾವುದೇ ಕಾರಣಕ್ಕೂ ಆರೋಪಿಗಳಿಗೆ ನಮ್ಮ ಸಮಾಜದವರು ಜಾಮೀನು ಕೊಡಿಸುವುದಿಲ್ಲ ಹಾಗೂ ಯಾವುದೇ ರೀತಿಯ ಸಹಾಯ- ಸಹಕಾರ ನೀಡುವುದಿಲ್ಲ. ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಕುಟುಂಬದವರೊಂದಿಗೆ ನಾವೆಲ್ಲ ಇರುತ್ತೇವೆ ಎಂದರು.
ಈ ಕೊಲೆಗೆ ಕಾರಣವಾದ ಎಲ್ಲರನ್ನೂ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ನಾವು ಪೊಲೀಸರಿಗೆ ಒತ್ತಾಯಿಸುತ್ತೇವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್ ಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಟನ್ ಪಾಷಾ, ಮಾನ್ವಿ ಪಾಷಾ, ಚಿಕನ್ ಪೀರ, ಖತೀಬ್ ಭಾಷಾ, ಸಿರಾಜ್ ಕೋಲ್ಕಾರ್, ಜಿಲಾನ್ ಕೀಲ್ಲೆದಾರ್, ಮೌಲಾ ಹುಸೇನ್ ಜಮಾದಾರ್, ಅಜೀಮ್ ಅತ್ತಾರ್, ಯಮನೂರಪ್ಪ ನಾಯಕ, ರಾಮಣ್ಣ ಕಲ್ಲಣ್ಣವರ್, ಟಿ ರತ್ನಾಕರ್, ಮಂಜುನಾಥ್ ಗೊಂಡಬಾಳ ಸೇರಿದಂತೆ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.