ಕೊಪ್ಪಳ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ನಗರದಲ್ಲಿ ಪ್ರತಿಭಟನೆ
ಕೊಪ್ಪಳ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟ ಹಾಲ್ ನಲ್ಲಿ ವಕೀಲ ರಾಕೇಶ ಕಿಶೋರ್ ಎಂಬ ವ್ಯಕ್ತಿ ತನ್ನ ಶೂ ಬಿಚ್ಚಿ ಮುಖ್ಯ ನ್ಯಾಯಮೂರ್ತಿ ಗಳಿಗೆ ಎಸೆಯಲು ಪ್ರಯತ್ನಿಸಿದ ಘಟನೆಯನ್ನು ವಿರೋಧಿಸಿ ನಗರದ ಅಶೋಕ ವೃತ್ತದ ಬಳಿ ಪ್ರಗತಿ ಪರರಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿ ಪರ ಹೋರಾಟಗಾರ ಅಲ್ಲಮಪ್ರಭು ಬೆಟದೂರು ಅವರು, ಈ ಘಟನೆಯಿಂದ ಇಡೀ ದೇಶದ ಜನರ ಮನಸಿಗೆ ಘಾಸಿಯಾಗಿದೆ. ರಾಕೇಶ ಕಿಶೋರ್ ಅನ್ನುವ ಸನಾತನವಾದಿ ಜಸ್ಟಿಸ್ ಗವಾಯಿ ಅವರಿಗೆ ಮಾತ್ರ ಅವಮಾನ ಮಾಡಿಲ್ಲ, ಇಡೀ ನ್ಯಾಯಾಂಗ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಕೊಡಲೇ ಅವರನ್ನು ಬಾರ್ ಕೌನ್ಸಿಲ್ ನಿಂದ ಅಮಾನತ್ತು ಮಾಡಬೇಕು, ಗೋಡ್ಸೆಯ ಧೋರಣೆಗೂ ಮತ್ತು ರಾಕೇಶನ ದೋರಣೆಗೂ ಯಾವುದೇ ವ್ಯತ್ಯಾಸ ಇಲ್ಲ,ಗಾಂಧಿಯ ಹತ್ಯೆಯಿಂದ ಪ್ರಾರಂಭವಾದ ಮೂಲಭೂತ ವಾದ ಹೇಗೆ ಮುಂದುವರೆದಿದೆ ಎಂದರೆ ಎಮ್. ಎಮ್ ಕಲಬುರ್ಗಿ, ಗೌರಿ ಲಂಕೇಶ್, ಗೋವಿಂದ್ ಬಾನ್ ಸಾಲೆ ಅಂತಹವರ ಕೊಲೆಯನ್ನು ಸನಾತನವಾದ ಮತ್ತು ಮೂಲ ಭೂತವಾದದ ನಡೆದಿದೆ, ಪುರೋಹಿತ ಶಾಹಿ ಶಕ್ತಿ ಈ ದೇಶದಲ್ಲಿ ಎಷ್ಟು ಪ್ರಬಲವಾಗಿದೆ ಎಂದು ಈ ಘಟನೆ ತಿಳಿಸುತ್ತದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಡಿಹೆಚ್ ಪೂಜಾರ್, ಎಸ್.ಎ.ಗಫರ್, ಮುದಕಪ್ಪ, ಎಂ.ಬಿ ಗೋನಾಳ್,ಸಾವಿತ್ರಿ ಮುಜುಂದಾರ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.