ಕೊಪ್ಪಳ : ಟಿಪ್ಪರ್ ಪಲ್ಟಿ; ಪ್ರಾಣಾಪಾಯದಿಂದ ಚಾಲಕ ಪಾರು
Update: 2026-01-05 08:20 IST
ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ಮರಳು ತುಂಬಿ ಕೊಂಡು ಬರುವಾಗ ಸೋಮವಾರ ಬೆಳಗಿನ ಜಾವ ಕೊಪ್ಪಳ ರಸ್ತೆಯಲ್ಲಿ ಟಿಪ್ಪರ್ ಪಲ್ಟಿ ಯಾಗಿರುವ ಘಟನೆ ನಡೆದಿದೆ.
ಟಿಪ್ಪರ್ ಪಲ್ಟಿ ಆಗುತ್ತಿದಂತೆ ಚಾಲಕ ಟಿಪ್ಪರ್ ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನ, ಸಾಮರ್ಥ ಮೀರಿ ಮರಳು ತುಂಬಿಕೊಂಡು ರಾಜರೋಷವಾಗಿ ಟಿಪ್ಪರ್ ಗಳು ಅಲೆದಾಡುತ್ತಿವೆ ಎಂದು ಪ್ರಗತಿಪರ ಚಿಂತಕ ಪಾಮಣ್ಣ ಅರಳಿಗನೂರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.