×
Ad

ಕೊಪ್ಪಳ: ಬಿರುಸಿನ ಮಳೆಯ ನಡುವೆಯೂ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಕೆ

Update: 2024-10-21 11:05 IST

ಕೊಪ್ಪಳ:  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಬಿರುಸಿನ ಮಳೆಯ ನಡುವೆಯೂ ಹುತಾತ್ಮ ಪೊಲೀರಿಗೆ ಗೌರವ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ ಅವರು ಹುತಾತ್ಮ ಪೊಲೀಸರ ಹೆಸರನ್ನು ಓದಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ನಲಿನ್ ಅತುಲ್,  "ಸೈನಿಕರಿಗಿಂತ ದೇಶದಲ್ಲಿನ ಪೊಲೀಸರು ಹೆಚ್ಚು ಸಂಖ್ಯೆಯಲ್ಲಿ ಹುತಾತ್ಮರಾಗಿದ್ದಾರೆ. ಸೈನಿಕರಿಗೆ ಅವರ ಶತ್ರು ಯಾರು ಎಂದು ಗೊತ್ತಿರುತ್ತೆ ಆದರೆ ಪೊಲೀಸರಿಗೆ ಗೊತ್ತಿರುವುದಿಲ್ಲ. ಅವರು ಜನರ ಮಧ್ಯೆ ಇರುತ್ತಾರೆ ಎಂದರು.

ಕೆ ಕೆ ಆರ್ ಡಿ ಬಿ ಯಿಂದ ವಾಹನ ಖರೀದಿಗೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ರಾಮ್ ಅರಸಿದ್ದಿ, ಸಿಬ್ಬಂದಿ, ಸಾರ್ವಜನಿಕರು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News