×
Ad

ಕೊಪ್ಪಳ| ಅಶೋಕ ವೃತ್ತಕ್ಕೆ ವಾಹನ ಢಿಕ್ಕಿ: ಕಳಚಿ ಬಿದ್ದ ಕಲ್ಲುಗಳು

Update: 2025-11-28 20:16 IST

ಕೊಪ್ಪಳ: ನಗರದ ಹೃದಯ ಭಾಗದಲ್ಲಿ ಇರುವ ಐತಿಹಾಸಿಕ ಅಶೋಕ ವೃತ್ತಕ್ಕೆ ಅಪರಿಚಿತ ವಾಹನ ಢಿಕ್ಕಿಯಾಗಿ ವೃತ್ತದ ಸುತ್ತಲಿನ ಭಾಗದ ಕಟ್ಟಡದ ಕಲ್ಲುಗಳು ಮುರಿದು ಬಿದ್ದಿವೆ. ಇದು ವರ್ಷದಲ್ಲಿ ಎರಡನೇ ಬಾರಿ ನಡೆದ ಘಟನೆಯಾಗಿದೆ.  

ಇದೇ ಅಶೋಕ ವೃತ್ತದಿಂದ ನಗರದ ಹೋರಾಟಗಳು, ಮೆರವಣಿಗೆಗಳು, ಜಾಥಾಗಳು ಸೇರಿದಂತೆ ಇನ್ನು ಅನೇಕ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ.  ಬಹಳ ಕಾಲದ ಹಿಂದೆ ಸ್ಥಾಪಿತವಾಗಿದ್ದ ವೀರಸ್ಥಂಭ ವಾಹನಗಳ ಅಪಘಾತಕ್ಕೆ ಗುರಿಯಾಗಿ ಶಿಥಿಲ ಹಂತಕ್ಕೆ ತಲುಪಿತ್ತು. ಆದ್ದರಿಂದ ಕಳೆದ ವರ್ಷವಷ್ಟೇ ಈ ವೃತ್ತವನ್ನು ಸುಮಾರು 39 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ನವೀಕರಿಸಲಾಗಿತ್ತು. ನವೀಕರಿಸಿದ ಕೆಲ ತಿಂಗಳ ನಂತರ ವಾಹನ ಢಿಕ್ಕಿಯಾಗಿ ಸುತ್ತಲಿನ ಭಾಗಗಳು ಮುರಿದು ಬಿದಿದ್ದವು. ಇದೀಗ ಮತ್ತೆ ವಾಹನ ಡಿಕ್ಕಿಯಾಗಿ ವೃತ್ತದ ಕಲ್ಲುಗಳು ಬಿದ್ದಿವೆ ಎಂದು ಹೇಳಲಾಗುತ್ತಿದೆ.

ನವೀಕೃತ ವೃತ್ತ ಉದ್ಘಾಟನೆಯಾಗಿ ಎರಡು ವರ್ಷಗಳೂ ಕಳೆದಿಲ್ಲ. ಅಶೋಕ ಸ್ತಂಭದ ಕೆಳಗಿನ ಕಟ್ಟೆಯ ಕಲ್ಲುಗಳು ಕಳಚಿ ಬಿದ್ದಿವೆ. ಸರ್ಕಲ್ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಪದೇ ಪದೇ ಈ ರೀತಿ ಯಾಗುತ್ತಿರುವುದರಿಂದ ಅಶೋಕ್ ವೃತ್ತಕ್ಕೆ ಸೂಕ್ತ ರಕ್ಷಣೆ ನೀಡಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News