×
Ad

ಕೊಪ್ಪಳ | ಮಹಾದಾಸೋಹದಲ್ಲಿ 400 ಮಂದಿ ಬಾಣಸಿಗರಿಂದ ಮಿರ್ಚಿ ತಯಾರಿಕೆ

Update: 2026-01-06 20:23 IST

ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರತಿ ವರ್ಷದಂತೆ ಜಾತ್ರಾ ಮಹಾದಾಸೋಹದಲ್ಲಿ ಈ ವರ್ಷವೂ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಜ.6ರ ಮಂಗಳವಾರದಂದು ಉತ್ತರ ಕರ್ನಾಟಕದ ವಿಶೇಷ ಖಾದ್ಯವಾದ ಮಿರ್ಚಿ ವಿತರಿಸಲಾಯಿತು.

ಮಿರ್ಚಿ ತಯಾರಿಕೆಗೆ 25 ಕ್ವಿಂಟಾಲ್ ಹಸೆ ಹಿಟ್ಟು, 12 ಬ್ಯಾರಲ್ ಎಣ್ಣೆ, 22 ಕ್ವಿಂಟಾಲ್ ಮೆಣಸಿನಕಾಯಿ, ರುಚಿಗೆ ತಕ್ಕಂತೆ ಅಜಿವಾನ, ಸಣ್ಣ ಉಪ್ಪು, ಸೊಡಾಪುಡಿ ಬಳಸಲಾಗಿದೆ. ಮಿರ್ಚಿ ತಯಾರಿಕೆಗೆ ಐವತ್ತು ಜನರ ನಾಲ್ಕು ತಂಡದಂತೆ ಒಟ್ಟು 400 ಜನ ಬಾಣಸಿಗರು ಹಾಗೂ ಅವರಿಗೆ 150 ಜನ ಸಹಾಯ ಮಾಡುವುದರ ಮೂಲಕ ಮಿರ್ಚಿ ತಯಾರಿಕೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಒಟ್ಟು 6 ಲಕ್ಷ ಮಿರ್ಚಿಗಳನ್ನು ವಿವಿಧ ಗ್ರಾಮದ ಬಾಣಸಿಗರು ಆಗಮಿಸಿ ತಯಾರಿಸುವುದರ ಮೂಲಕ ಸೇವೆಗೈದರು ಎಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News