×
Ad

Koppala | ಕೋರ್ಟ್ ಆವರಣದಲ್ಲೇ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ : ಪತಿಯ ಬಂಧನ

Update: 2025-11-19 18:26 IST

ಕೊಪ್ಪಳ : ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ, ಅತ್ತೆ ಮತ್ತು ಮಾವನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.

ನ್ಯಾಯಾಲಯದ ಆವರಣದಲ್ಲಿನ ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ಕೌನ್ಸಿಲಿಂಗ್‌ಗೆ ಮುನ್ನ ಈ ಘಟನೆ ನಡೆದಿದೆ. ಕಾರಟಗಿ ತಾಲೂಕಿನ ಸಿದ್ದಾಪುರದ ಚಿರಂಜೀವಿ ಭೋವಿ ಎಂಬಾತ ತನ್ನ ಪತ್ನಿ ರೋಜಾ, ಅತ್ತೆ ಶಾಂತಮ್ಮ, ಮಾವ ಶಂಕ್ರಪ್ಪ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ ವಕೀಲರು ಆತನನ್ನು ತಡೆದು ಮೂವರನ್ನು ರಕ್ಷಿಸಿದ್ದಾರೆ.

ಚಿರಂಜೀವಿ ಭೋವಿಗೆ 12 ವರ್ಷ ಹಿಂದೆ ರೋಜಾ ಜೊತೆ ವಿವಾಹವಾಗಿತ್ತು. ಚಿರಂಜೀವಿಯ ಕಿರುಕುಳಕ್ಕೆ ಬೇಸತ್ತು ರೋಜಾ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ಮಧ್ಯಸ್ಥಿಕೆದಾರರ ಕೇಂದ್ರಕ್ಕೆ ಕೌನ್ಸಿಲಿಂಗ್‌ಗೆ ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ.

ಚಿರಂಜೀವಿಯನ್ನು ಕೊಪ್ಪಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News