×
Ad

ಕೊಪ್ಪಳ | ಭಾಗ್ಯನಗರ ಪಟ್ಟಣ ಪಂಚಾಯತ್‌ನಿಂದ ಬೈಕ್ ರ‍್ಯಾಲಿ ಮೂಲಕ ಸ್ವಚ್ಛತಾ ಸಂದೇಶ

ಸ್ವಚ್ಛತೆ ಕೆಲಸವು ದೇವರ ಕೆಲಸ: ತುಕಾರಾಮಪ್ಪ

Update: 2025-11-13 19:09 IST

ಕೊಪ್ಪಳ.ನ.13 : ಸ್ವಚ್ಚ ಭಾರತ ಮಿಷನ್ 2.0 ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ್ ವತಿಯಿಂದ ಗುರುವಾರ ಬೈಕ್ ರ‍್ಯಾಲಿ ಮೂಲಕ ಬೀದಿ ಬೀದಿಗಳಲ್ಲಿ ಸ್ವಚ್ಛತಾ ಸಂದೇಶಗಳನ್ನು ಸಾರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭಾಗ್ಯನಗರ ಪಟ್ಟಣ ಪಂಚಾಯತ್ ಅಧ್ಯಕ್ಷ ತುಕಾರಾಮಪ್ಪ ಗಡಾದ ಅವರು,  ಸ್ವಚ್ಛತೆ ಕೆಲಸವು ದೇವರ ಕೆಲಸವಾಗಿದೆ ಎಂದು ಜನರು ಭಾವಿಸಬೇಕು. ಸಾರ್ವಜನಿಕರು ತಮ್ಮ ಮನೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುಚಿತ್ವ ಕಾರ್ಯವನ್ನು ಪ್ರತಿದಿನ ಮಾಡಬೇಕು. ಕಸವನ್ನು ಎಲ್ಲಂದರಲ್ಲೇ ಬಿಸಾಡದೇ ಪಟ್ಟಣ ಪಂಚಾಯತ್ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು ಎಂದರು.

ಪ.ಪಂ ಉಪಾಧ್ಯಕ್ಷರಾದ ಹೊನ್ನೂರಸಾಬ ಮುಹಮ್ಮದ್‌ ಸಾಬ್‌ ಬೈರಾಪೂರ ಅವರು ಮಾತನಾಡಿ, ಎಲ್ಲಾ ಸಾರ್ವಜನಿಕರು ನಮ್ಮ ಭಾಗ್ಯನಗರವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಳ್ಳಬೇಕು. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು ಹಾಗೂ ಬಯಲು ಮಲ ವಿಸರ್ಜನೆ ಮಾಡದೇ, ವೈಯಕ್ತಿಕ ಶೌಚಾಲಯಗಳನ್ನು ಬಳಕೆ ಮಾಡಿ ಶುಚಿತ್ವವನ್ನು ಕಾಪಾಡುವಲ್ಲಿ ಸಹಕರಿಸಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ ಬಬಲಾದ ಅವರು ಮಾತನಾಡಿದರು.

ಈ ವೇಳೆ ಪ್ರತಿಜ್ಞೆ ವಿಧಿ ಬೋದಿಸಿ,  ಪ್ರತಿಜ್ಞೆ ಪತ್ರದಲ್ಲಿ ಸಹಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News