×
Ad

ಕೊಪ್ಪಳ| ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ

Update: 2025-11-30 18:42 IST

ಯಲಬುರ್ಗಾ: ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ರೈತರ ಹಿತಕಾಪಾಡಬೇಕಿದ್ದ ಸರಕಾರ ಸಿಎಂ ಗದ್ದುಗೆಗಾಗಿ ಕಾಲಹರಣ ಮಾಡುತ್ತಿದೆ. ಜನರ ಹಿತ ಕಾಯಬೇಕಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರೈತ ವಿರೋಧಿ ಸರಕಾರ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ ಅರೋಪಿಸಿದರು.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಹಾಲಪ್ಪ ಆಚಾರ್‌, ಬಿಟ್ಟಿಭಾಗ್ಯದ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿಕೊಂಡಿರುವ ರಾಜ್ಯ ಸರಕಾರ ಹಣದ ಕೊರತೆ ಎದುರಿಸುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಾರುತಿ, ಹೊಸಮನಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಸುರೇಶಗೌಡ ಶಿವನಗೌಡ, ಹಂಚ್ಯಾಳಪ್ಪ ತಳವಾರ, ಸಿ.ಎಚ್ ಪೊಲೀಸಪಾಟೀಲ, ಶಿವಲೀಲಾ ದಳವಾಯಿ ಮಾತನಾಡಿದರು.

ಈ ವೇಳೆ ಮುಖಂಡರಾದ ಶಿವಕುಮಾರ್‌, ಕಲ್ಲಪ್ಪ ಕರಮುಡಿ ಬಸವರಾಜ, ಗುರುಗುಳಿ, ಶಿವಪ್ಪ ವಾದಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News