ಕೊಪ್ಪಳ | ಮುಳ್ಳಿನ ಪೊದೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ
Update: 2025-11-19 18:54 IST
ಸಾಂದರ್ಭಿಕ ಚಿತ್ರ
ಕಾರಟಗಿ : ಕೊಪ್ಪಳ ಜಿಲ್ಲೆಯ ಉಳೆನೂರು ಗ್ರಾಮದಲ್ಲಿ ಮುಳ್ಳಿನ ಪೊದೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.
ಪ್ಲಾಸ್ಟಿಕ್ ಚೀಲದ ಒಳಗೆ ನವಜಾತ ಹೆಣ್ಣು ಶಿಶುವನ್ನು ಹಾಕಿ ಗ್ರಾಮದ ಹೊರಹೊಲಯದ ಮುಳ್ಳಿನ ಪೊದೆಯಲ್ಲಿ ದುಷ್ಕರ್ಮಿಗಳು ಎಸೆದಿದ್ದಾರೆ. ಮನೆಯ ಮಾಲಕ ಮನೆಯ ಬಳಿ ಸ್ವಚ್ಛತೆಗೆಂದು ತೆರಳಿದ ವೇಳೆ ಕೆಟ್ಟ ವಾಸನೆ ಬರುವುದನ್ನು ಗಮನಿಸಿ ಪ್ಲಾಸ್ಟಿಕ್ ಕವರ್ ತೆಗೆದು ನೋಡಿದಾಗ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಸ್ಥಳೀಯರು ಕಾರಟಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪಿಎಸ್ ಐ ಕಾಮಣ್ಣ, ಎಎಸ್ ಐ ವೆಂಕರಡ್ಡಿ ಹಾಗೂ ಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ್ ಕುಮಾರ್ ತೆರಳಿ ಪರಿಶೀಲನೆ ನಡೆಸಿದ್ದಾರೆ.