×
Ad

ಕೊಪ್ಪಳ | 12 ದಿನಗಳನ್ನು ಪೂರೈಸಿದ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಅನಿರ್ಧಿಷ್ಟಾವಧಿ ಧರಣಿ

ನಾಟಕಗಳ ಮೂಲಕ ಜನಜಾಗೃತಿಗೆ ಸಿದ್ಧತೆ : ಲಕ್ಷ್ಮಣ ಪೀರಗಾರ

Update: 2025-11-11 18:35 IST

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರುದ್ಧ ಜನ ಸಂಘಟಿಸಲು ಮತ್ತು ಅರಿವು ಮೂಡಿಸಲು ಸಣ್ಣ ನಾಟಕಗಳನ್ನು ಮಾಡುತ್ತೇವೆ ಎಂದು ರಂಗಕರ್ಮಿ ಲಕ್ಷ್ಮಣ ಪೀರಗಾರಹೇಳಿದರು.

ಬಲ್ಡೋಟಾ ವಿಸ್ತರಣೆ ವಿರೋಧಿಸಿ ನಗರಸಭೆ ಸಂಕೀರ್ಣದ ಮುಂದೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯ 12ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರ ಮತ್ತು ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳ ಸುಮಾರು 1.5 ಲಕ್ಷ ಜನರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಈ ಕಾರ್ಖಾನೆಯಿಂದ ಉಂಟಾಗುತ್ತಿದೆ ಎಂದು ಹೆಳಿದರು.

ಕಲಾವಿದರು ಜನರಿಗೆ ಸದಾ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಾರೆ, ಅದೇ ರೀತಿ ನಾವು ಕಲಾವಿದರಾಗಿ ಅಂತಹ ಕಲಾ ಸೇವೆ ಮೂಲಕ ಜನರಿಗೆ ಸರಿಯಾದ ಮಾಹಿತಿ ಒದಗಿಸುತ್ತೇವೆ, ಜನ ಇನ್ನೂ ಸುಖಾಸೀನರಾಗಿ ಉಳಿಯಬಾರದು ಎಂದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ, ರಾಜಕೀಯ ನಾಯಕರು ಜನರ ಕಷ್ಟವನ್ನು ನೋಡಬೇಕು, ಅವರನ್ನು ಸಾಮಾನ್ಯ ಜನ ದೇವರಂತೆ ಕಾಣುತ್ತಾರೆ, ದೇವರು ಕಣ್ಣುಮುಚ್ಚಿ ಕುಳಿತರೂ ದಿವ್ಯ ಶಕ್ತಿಯಿಂದ ಜನರ ಕಷ್ಟ ಆಲಿಸುತ್ತಾನೆ, ಹಾಗೆ ಜನಪ್ರತಿನಿಧಿಗಳು ಇಲ್ಲಿನ ಜನರು ಮನಸಾರೆ ಆಯ್ಕೆ ಮಾಡಿ ತಮಗೆ ಒಳ್ಳೆಯದು ಮಡುತ್ತಾರೆ ಎಂಬ ನಂಬಿಕೆ ಹೊಂದಿರುತ್ತಾರೆ, ಅಂತಹ ನಂಬಿಕೆ ಕಳೆಯಬಾರದು, ತುರ್ತಾಗಿ ಜನರಿಗೆ ನ್ಯಾಯ ಒದಗಿಸಿ, ಜನರ ಅಪೇಕ್ಷೆಯಂತೆ ಕಾರ್ಖಾನೆ ಮುಚ್ಚಬೇಕು, ಬಿಜೆಪಿ-ಜೆಡಿಎಸ್ ಕೆಂದ್ರದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ತಮ್ಮ ಪಾತ್ರ ನಿಭಾಯಿಸಬೇಕು ಎಂದರು.

ರೈತ ಮುಖಂಡ ಗಣೇಶರಡ್ಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸಂಚಾಲಕರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಸಾಹಿತಿ ಡಿ.ಎಂ.ಬಡಿಗೇರ, ಮಹಾಂತೇಶ ಕೊತಬಾಳ, ಮಖಬೂ ರಾಯಚೂರು, ಮೂಕಪ್ಪ ಮೇಸ್ತ್ರಿ ಬಸಾಪುರ, ಮಹಾದೇವಪ್ಪ ಎಸ್. ಮಾವಿನಮಡು, ಚನ್ನವೀರಯ್ಯ ಹಿರೇಮಠ, ಕಾಶಪ್ಪ ಚಲವಾದಿ, ಪ್ರಕಾಶ ಹೊಳೆಯಪ್ಪನವರ, ಗವಿಸಿದ್ಧಪ್ಪ ಹಲಿಗಿ. ಖಾಸಿಂಸಾಬ ಬೆಂಡೆಕಾಯಿ, ಭೈರಾಜಿ ಎಂ ಪೂಜಾರಿ, ಮಂಗಳೇಶ ರಾಠೋಡ, ರಂಗಕರ್ಮಿ ಶಿವಪ್ಪ ಸಿ. ಬಸವರಾಜ ದೇಸಾಯಿ, ಹನುಮಂತಪ್ಪ ಮಲ್ಲರಡ್ಡಿ, ಕೆ.ಕೃಷ್ಣಾ, ಮಾರುತೇಶ ಚಿಕ್ಕಬಗನಾಳ. ಕರೀಮ್ ಪಾಷಾ, ಮುದಕಪ್ಪ ಎಂ ಹೊಸಮನಿ, ಬಸವರಾಜ ಶೀಲವಂತಲ, ಚನ್ನಬಸಪ್ಪ ಅಪ್ಪಣ್ಣವರ, ಎಸ್. ಎ. ಗಫಾರ್, ರವಿ ಕಾಂತನವರ, ಸುಂಕಮ್ಮ ಪಡಚಿಂತಿ, ಗಂಗಮ್ಮ ಕವಲೂರು, ಗೌರಿ ಗೋನಾಳ, ದುರುಗೇಶ ಬರಗೂರ, ಭೀಮಪ್ಪ ಯಲಬುರ್ಗಾ, ಸುಂಕಪ್ಪ ಮೀಸಿ ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News