×
Ad

ಕೊಪ್ಪಳ | ಪತ್ನಿಯನ್ನು ಹತ್ಯೆಗೈದು ಪರಾರಿಯಾಗಿದ್ದ ವ್ಯಕ್ತಿ; 23 ವರ್ಷಗಳ ಬಳಿಕ ಬಂಧನ

Update: 2025-06-29 13:06 IST

ಬಂಧಿತ ಆರೋಪಿ

ಕೊಪ್ಪಳ/ ಗಂಗಾವತಿ: ತನ್ನ ಮೂರನೇ ಪತ್ನಿಯನ್ನು ಹತ್ಯೆಗೈದು 23 ವರ್ಷಗಳಿಂದ ಪರಾರಿಯಾಗಿದ್ದ 74 ವರ್ಷದ ವೃದ್ಧರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನಿವೃತ್ತ ಸರಕಾರಿ ನೌಕರ ಹನುಮಂತಪ್ಪ ಹುಸೇನಪ್ಪ ಎಂದು ಗುರುತಿಸಲಾಗಿದೆ.

ಪ್ರಕರಣ ಹಿನ್ನೆಲೆ:

ಹನುಮಂತಪ್ಪ ಹುಸೇನಪ್ಪ ತನ್ನ 49ನೇ ವಯಸ್ಸಿನಲ್ಲಿ ಪತ್ನಿಯ ಮೇಲೆ ಅನುಮಾನಗೊಂಡು ಕೊಲೆ ಮಾಡಿದ್ದನು. ನಂತರ ಪತ್ನಿಯ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಸರಕಾರಿ ಬಸ್‌ನಲ್ಲಿ ಪಾರ್ಸೆಲ್ ಎಂದು ಹೇಳಿ ಸಾಗಿಸಿ ತಲೆಮರೆಯಿಸಿಕೊಂಡಿದ್ದನು. ಈತನ ವಿರುದ್ಧ 2002ರಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು,

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿತ್ತು, ಈ ಶಿಕ್ಷೆಯ ಭಯದಿಂದ ಹನುಮಂತಪ್ಪ ಪರಾರಿಯಾಗಿದ್ದನು. ಆರೋಪಿ ಪತ್ತೆಗಾಗಿ ಎಷ್ಟು ಪ್ರಯತ್ನಪಟ್ಟರೂ ಸಿಕ್ಕಿರುವುದಿಲ್ಲ.

ಆದರೆ, ಆರೋಪಿಯು ತನ್ನ ಸ್ವಗ್ರಾಮಕ್ಕೆ ಕೆಲದಿನಗಳ ಹಿಂದೆ ಬಂದಿದ್ದನು. ಇದನ್ನು ಅಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ರಾಯಚೂರು ಜಿಲ್ಲೆಯ ಸಿರವಾರದಿಂದ ಎಎಸ್‌ಐ ಅತೀಕ್ ಅಹ್ಮದ್ ಅವರ ತಂಡ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News