×
Ad

ʼಗ್ಯಾರಂಟಿʼ ಬೇಡ ಅಂತ ಹೇಳಿ, ಅದೇ ದುಡ್ಡಲ್ಲಿ ರಸ್ತೆ ಮಾಡಿಸ್ತೀನಿ: ಶಾಸಕ ಬಸವರಾಜ ರಾಯರೆಡ್ಡಿ

Update: 2025-07-06 12:03 IST

ಕೊಪ್ಪಳ: ʼಅಕ್ಕಿ ಬೇಡ, ಗ್ಯಾರಂಟಿ ಬೇಡ, ನಮಗೆ ಏನೂ ಬೇಡಾ ಅಂತಾ ಹೇಳಿ, ಅದೇ ಹಣದಲ್ಲಿ ರಸ್ತೆ ಮಾಡಿಕೊಟ್ಟು ಬಿಡ್ತೀನಿʼ ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಮತ್ತು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕುಕನೂರ ತಾಲೂಕಿನ ರ್ಯಾವಣಕಿ ಗ್ರಾಮದಲ್ಲಿ ಶನಿವಾರ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡುತ್ತಿದ್ದ ವೇಳೆ, ಮಹಿಳೆಯರಿಗೆ ಗೃಹಲಕ್ಷ್ಮಿ ಕೊಡುತ್ತಿದ್ದೀರಿ, ನಮಗೆ ರಸ್ತೆ ಕೊಡಿ ಎಂದು ವೇದಿಕೆಯ ಮುಂದೆ ಇದ್ದ ಜನರು ಕೂಗಿದರು.

ಅದಕ್ಕೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ʼಗ್ಯಾರಂಟಿಗಳು ಬೇಡ ಅಂತ ಹೇಳಿ, ಆ ದುಡ್ದಲ್ಲಿ ರಸ್ತೆ ಮಾಡಿಸುತ್ತೇನೆ. ನಮ್ಮ ಜನ ಗ್ಯಾರಂಟಿಗಳು ಬೇಡ ಎಂದು ಹೇಳುತ್ತಿದ್ದಾರೆʼ ಎಂದು ಮುಖ್ಯಮಂತ್ರಿಗೆ ಸಲಹೆ ಕೊಟ್ಟು ಬಿಡುತ್ತೇನೆ ಎಂದು ತಮಾಷೆಯಾಗಿ ಹೇಳಿದರು.

ಇದಕ್ಕೆ ಜನರು, "ಹಾಗೆ ಮಾಡಬೇಡಿ, ಮಹಿಳೆಯರಿಗೆ ಹಣ ಕೊಡುತ್ತಿದ್ದೀರಿ... ನಮಗೆ ಹೊಲಗಳಿಗೆ ಹೋಗಲು ರಸ್ತೆ ಮಾಡಿಸಿ" ಎಂದು ಒತ್ತಾಯಿಸಿದರು. ಇದಕ್ಕೆ ರಾಯರಡ್ಡಿ, ಮುಂದಿನ ದಿನಗಳಲ್ಲಿ ರಸ್ತೆ ಮಾಡಿಸುವುದಾಗಿ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News