ಮೇಘಾಲಯದ ರಾಜಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಕುಟುಂಬದಿಂದ ತೊಗಲು ಬೊಂಬೆ ಪ್ರದರ್ಶನ
Update: 2025-08-15 19:59 IST
ಕೊಪ್ಪಳ: ತಾಲೂಕಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ಶಿಳ್ಳೆಕ್ಯಾತರ ಕುಟುಂಬವು ಮೇಘಾಲಯ ರಾಜ್ಯದ ರಾಜಭವನದ ಆವರಣದಲ್ಲಿ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅಲ್ಲಿನ ಕಾರ್ಯಕ್ರಮದಲ್ಲಿ ತೊಗಲುಗೊಂಬೆ ಪ್ರದರ್ಶನ ನೀಡಿದ್ದು, ಅಲ್ಲಿನ ರಾಜ್ಯಪಾಲ ಕರ್ನಾಟಕದವರೇ ಆದ ವಿಜಯಶಂಕರ್, ಅಲ್ಲಿನ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಉಪಸ್ಥಿತರಿದ್ದು ತೊಗಲುಗೊಂಬೆ ಪ್ರದರ್ಶನ ವೀಕ್ಷಣೆ ಮಾಡಿದ್ದಾರೆ.
ಮೇಘಾಲಯ ರಾಜ್ಯಪಾಲ ವಿಜಯಶಂಕರ ಅವರ ಅಹ್ವಾನದ ಮೇರೆಗೆ ಭಾಗವಹಿಸಿ ಮೇಘಾಲಯ ರಾಜ್ಯಧಾನಿ ಶಿಲಾಂಗ್‌ನ ರಾಜ ಭವನದ ಆವರಣದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭೀಮವ್ವ ಶಿಳ್ಳಿಕ್ಯಾತರ ಕುಟುಂಬ ಭಾಗವಹಿಸಿ ಮೇಘಾಲಯದ ಸರಕಾರದಿಂದ ಗೌರವ ಸ್ವೀಕರಿಸಿದ್ದಾರೆ. ಇದು ಕನ್ನಡ ನಾಡಿಗೆ ಮತ್ತು ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.