×
Ad

ಕೊಪ್ಪಳ: ಎಸ್.ಎಫ್.ಐನಿಂದ ಭಗತ್ ಸಿಂಗ್ ಜನ್ಮದಿನ ಆಚರಣೆ

ಭಗತ್ ಸಿಂಗ್ ಜಯಂತಿಯನ್ನು ಸರ್ಕಾರ ಅಧಿಕೃತವಾಗಿ ಆಚರಣೆ ಮಾಡಲಿ: ಬಾಲಾಜಿ ಚಳ್ಳಾರಿ

Update: 2025-09-28 18:27 IST

ಕೊಪ್ಪಳ: ಸ್ವಾತಂತ್ರ್ಯ ಹೋರಾಟದ ಧೃವತಾರ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಯುವಕರನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದವರು ಭಗತ್ ಸಿಂಗ್ ಎಂಬ ಕಿಚ್ಚು ಎಲ್ಲರ ಮನದಲ್ಲಿ ಮೂಡಲಿ ಅವರ ವಿಚಾರಗಳನ್ನು ವಿದ್ಯಾರ್ಥಿ-ಯುವ ಜನರು ಸ್ಫೂರ್ತಿಯಾಗಿ ತಗೆದುಕೊಳ್ಳಬೇಕು, ಸರ್ಕಾರವು ಭಗತ್ ಸಿಂಗ್ ಜಯಂತಿಯ ನ್ನು ಅಧಿಕೃತವಾಗಿ ಆಚರಣೆ ಮಾಡುವಂತಗಲಿ ಎಂದು ಎಸ್ ಎಫ್ ಐ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಹೇಳಿದರು.

ನಗರದ ಹಿಂದುಳಿದ ವರ್ಗಗಳ ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ಎಸ್ ಎಫ್ ಐ ತಾಲೂಕ ಸಮಿತಿಯಿಂದ ಆಯೋಜಿಸಿದ ಶಹೀದ್ ಭಗತ್ ಸಿಂಗ್ ಅವರ ಜನ್ಮ ದಿನಚಾರಣೆಯನ್ನು ಭಗತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಭಗತ್ ಸಿಂಗ್ ಅಂದರೆ ರೋಮಾಂಚನಗೊಳುವ ಒಂದು ದೊಡ್ಡ ಶಕ್ತಿ. ಭಾರತದ ಸ್ವಾತಂತ್ರ್ಯ ಚಳುವಳಿಗೆ ಯುವಕರ ಪಡೆಯನ್ನು ಒಗ್ಗೂಡಿಸಿ ಪ್ರಮುಖ ಪಾತ್ರವಹಿಸಿದ ಭಗತ್ ಸಿಂಗ್ ಇಂದಿನ ಅವ್ಯವಸ್ಥೆ, ಅನ್ಯಾಯದ ವಿರುದ್ಧವಾಗಿ ಸ್ಫೂರ್ತಿಯಾಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿ-ಯುವಜನರ ಆಲೋಚನೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವುಕುಮಾರ್ ಈಚಾನಳ್, ತಾಲೂಕ ಉಪಾಧ್ಯಕ್ಷ ಶರೀಫ್ ಎಂ, ವಿದ್ಯಾರ್ಥಿ ಘಟಕದ ಪದಾಧಿಕಾರಿಗಳಾದ ದೊಡ್ಡಬಸವ ಅಗಸಿಮುಂದಿನ, ಮಂಜಣ್ಣ, ಹನುಮೇಶ್, ಶರಣ ಬಸವ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News