×
Ad

ಇಕ್ಬಾಲ್ ಅನ್ಸಾರಿ ಮನೆಗೆ ಸಿದ್ದರಾಮಯ್ಯ ಭೇಟಿ: ಮುನಿಸು ಶಮನಕ್ಕೆ ಯತ್ನ

Update: 2024-03-03 10:26 IST

ಗಂಗಾವತಿ, ಮಾ.3: ಪಕ್ಷದ ಕೆಲವು ಜಿಲ್ಲಾ ನಾಯಕರ ವರ್ತನೆಯಿಂದ ಮುನಿಸಿಕೊಂಡಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ನಿವಾಸಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿ ಮುನಿಸು ಶಮನಕ್ಕೆ ಯತ್ನಸಿದ್ದಾರೆ.

ಶನಿವಾರ ತಡರಾತ್ರಿ ಗಂಗಾವತಿ ನಗರದಲ್ಲಿರುವ ಅನ್ಸಾರಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಅನ್ಸಾರಿ ಕುಟುಂಬದ ಜೊತೆ ಕೆಲ ಹೊತ್ತು ಕಳೆದ ಬಳಿಕ ಗೌಪ್ಯವಾಗಿ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ಈ ವೇಳೆ ಇಕ್ಬಾಲ್ ಅನ್ಸಾರಿಯವರ ಮೊಮ್ಮಗಳ ಜೊತೆ ಆಟವಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಪುಟ್ಟ ಮಗುವಿನ ಜೊತೆ ಕಳೆದ ಒಂದಷ್ಟು ಕ್ಷಣಗಳು ದಿನದ ದಣಿವೆಲ್ಲವನ್ನು ಮರೆಸಿತು" ತಮ್ಮ 'X' ಖಾತೆಯಲ್ಲಿ ಫೋಟೋಗಳೊಂದಿಗೆ ಪೋಸ್ಟ್ ಹಾಕಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತಯೇ ಅನ್ಸಾರಿ – ಸಿದ್ದರಾಮಯ್ಯ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ಹಿಂದೆ ಗಂಗಾವತಿಯಲ್ಲಿ ಸ್ಪರ್ಧಿಸಿ ಸೋತಿದ್ದ ಅನ್ಸಾರಿ, ತನ್ನ ಸೋಲಿಗೆ ಕಾಂಗ್ರೆಸ್ ನ ಕೆಲವು ನಾಯಕರೇ ಕಾರಣ ಎಂದು ಆರೋಪಿಸಿದ್ದರು.



 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News