×
Ad

ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗುತ್ತೆ: ಸಚಿವ ಶಿವರಾಜ್ ತಂಗಡಗಿ

Update: 2025-08-06 18:57 IST

ಕೊಪ್ಪಳ: ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗುತ್ತೆ ಎಂದು ಹಿಂದುಳಿದ ಕಲ್ಯಾಣ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.

ಬುಧವಾರ ಮೃತ ಯುವಕನ ಮನೆಗೆ ಶಾಕರೊಂದಿಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಈ ಘಟನೆಯು ನೋವಿನ ಸಂಗತಿಯಾಗಿದ್ದು, ಸಣ್ಣ ವಯಸ್ಸಿನ ಯುವಕ ಗವಿಸಿದ್ದಪ್ಪನಿಗೆ ಹೀಗಾಗಿದ್ದು, ಸಣ್ಣ ನೋವಲ್ಲ ಎಂದು ಹೇಳಿದರು.

ತಂದೆ, ತಾಯಿಗೆ ಅವರ ಮಗನನ್ನು ಮರಳಿಸಲು ಆಗುವುದಿಲ್ಲ. ಆದರೆ ಸರ್ಕಾರದಿಂದ ಅವರಿಗೆ ಏನಾಗಬೇಕೊ ಅದನ್ನು ನಾವು ಮಾಡುತ್ತೇವೆ. ಗವಿಸಿದ್ದಪ್ಪ ಅವರ ಕುಟುಂಬದವರೊಂದಿಗೆ ನಾವು ಮತ್ತು ಸರ್ಕಾರ ಇದೆ ಎಂದು ಹೇಳಿದರು.

ಈಗಾಗಲೇ ಈ ಪ್ರಕರಣದ ಕುರಿತು ತನಿಖೆ ಆರಂಭವಾಗಿದೆ. ತನಿಖೆ ನಡೆಯುತ್ತಿರುವಾಗ ಇದರಲ್ಲಿ ನಾವು ಮಧ್ಯ ಪ್ರವೇಶಿಸಲು ಬರುವುದಿಲ್ಲ, ತನಿಖೆಯಲ್ಲಿ ಯಾವ ಅಧಿಕಾರಿಗೂ ಒತ್ತಡ ಇಲ್ಲ, ನ್ಯಾಯಯುತವಾಗಿ ತನಿಖೆ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮೃತ ಯುವಕನ ಕುಟುಂಬಕ್ಕೆ ಪರಿಹಾರಧನವಾಗಿ ಸಮಾಜಕಲ್ಯಾಣ ವತಿಯಿಂದ 4 ಲಕ್ಷ ರೂ.ಗಳನ್ನು ನೀಡಲಾಯಿತು.

ಗವಿಸಿದ್ದಪ್ಪ ನಾಯಕ್ ಕೊಲೆ ಖಂಡಿಸಿ ವಾಲ್ಮಿಕಿ ಸಾಮಾಜದಿಂದ ನಾಳೆ ( ಶುಕ್ರವಾರ) ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಈ ಕುರಿತು ಪ್ರತಿಭಟನೆ ಮಾಡುವ ಹಕ್ಕು ಅವರಿಗೆದೆ. ಅವರು ಪ್ರತಿಭಟನೆ ಮಾಡುತ್ತಾರೆ ಎಂದು ಈ ವೇಳೆ ಸಚಿವ ತಂಗಡಗಿ ಅವರು ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News