×
Ad

ಕೊಪ್ಪಳದಲ್ಲಿ ಜಗತ್ತಿನ ಅತ್ಯಂತ ದುಬಾರಿ ದ್ರಾಕ್ಷಿ ರೂಬಿ ರೋಮನ್

Update: 2025-02-23 12:19 IST

ಕೊಪ್ಪಳ : ಇಂದು ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಹಣ್ಣುಗಳ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಿದರು.

ಈ ಮೇಳದಲ್ಲಿ ತೋಟಗಾರಿಕೆ ಇಲಾಖೆಯಿಂದ ಪ್ರದರ್ಶನಕ್ಕೆ ಇಡಲಾಗಿದ್ದ, ಜಗತ್ತಿನ ದುಬಾರಿ ದ್ರಾಕ್ಷಿಯಾದ ರೂಬಿ ರೋಮನ್ ದ್ರಾಕ್ಷಿಯು ಎಲ್ಲರ ಗಮನ ಸೆಳೆದಿದೆ, ಈ ತಳಿಯ ಒಂದು ಕೆಜಿ ದ್ರಾಕ್ಷಿಯು ಎಂಟು ಲಕ್ಷ ರೂಪಾಯಿ ಬೆಲೆಬಾಳುತ್ತದೆ.

ಈ ತಳಿಯು ಜಪಾನ್ ದೇಶದಾಗಿದ್ದು, ಅಲ್ಲಿನ ಇಶಿಕಾವಾ ಪ್ರಿಫೆಕ್ಚರ್‌ನಲ್ಲಿ ಬೆಳೆಸಲಾಗುತ್ತದೆ. ಅಲ್ಲಿಂದ ಮುಂಬೈ ಮುಖಾಂತರ ಕೊಪ್ಪಳಕ್ಕೆ ತರಿಸಿ ಜನರಿಗೆ ತೋರಿಸುವ ಮತ್ತು ಅದನ್ನು ಇಲ್ಲಿನ ರೈತರು ಬೆಳೆಸುವ ಸಲುವಾಗಿ ತರಲಾಗಿದೆ.

ರೂಬಿ ರೋಮನ್ ಒಂದು ಬಗೆಯ ಟೇಬಲ್ ದ್ರಾಕ್ಷಿಯಾಗಿದ್ದು, ರೂಬಿ ರೋಮನ್ ತಳಿಯ ಪ್ರತಿ ದ್ರಾಕ್ಷಿಯು ಸಾಮಾನ್ಯ ದ್ರಾಕ್ಷಿಗಿಂತ ಶೇ.18 ಕ್ಕಿಂತ ಹೆಚ್ಚು ಸಕ್ಕರೆಯ ಅಂಶವನ್ನು ಹೊಂದಿರುತ್ತದೆ, ಇದರ ಜೊತಗೆ ಇದು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಾಗಿ ಹೊಂದಿದ್ದು, ಮಿಟಮಿನ್ ಸಿ ಅನ್ನು ಹೊಂದಿರುತ್ತದೆ.

ತೋಟಗಾರಿಕೆ ಇಲಾಖೆಯ ಉಪನಿರ್ದೆಶಕ ಕೃಷ್ಣ ಉಕ್ಕುಂದ್ ಅವರು, ರೈತರಿಗೆ ಅನುಕೂಲ ವಾಗುವಂತೆ ಕೃಷಿ ಮೇಳವನ್ನು ಆಯೋಜಿಸಿ ರೈತರಿಂದ ನೇರವಾಗಿ ಜನರಿಗೆ ತಲುಪಿಸುವಂತಹ ಕೆಲಸ ಮಾಡುತಿದ್ದಾರೆ, ಕಳೆದ ವರ್ಷ ಜಗತ್ತಿನ ದುಬಾರಿ ಮಾವಿನ ಹಣ್ಣು ಮಿಯಾ ಝಾಕಿ ಅನ್ನು ಪ್ರದರ್ಶಕ್ಕೆ ತರಲಾಗಿತ್ತು, ಮಿಯಾ ಝಾಕಿ ತಳಿಯನ್ನು ಇಲ್ಲಿನ ರೈತರಿಂದ ಬೆಳಸಲಾಗುತ್ತಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News