×
Ad

ಕೊಪ್ಪಳ| ಮನೆಗೆ ನುಗ್ಗಿ ಕಳವು; ಇಬ್ಬರು ಆರೋಪಿಗಳ ಬಂಧನ

Update: 2024-10-21 19:05 IST

ಕೊಪ್ಪಳ: ಯಲಬುರ್ಗಾ ತಾಲೂಕಿನ ರಾಮನಗರದಲ್ಲಿ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ಅವರು ಹೇಳಿದರು.

ಪ್ರತಿಕಾ ಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು ಅರೋಪಿಗಳಾದ ಭೀರಪ್ಪ ಮತ್ತು ನಾಗರಾಜ ರಿಂದ 182.2 ಗ್ರಾಂ ಬಂಗಾರ, 90 ಗ್ರಾಂ ಬೆಳ್ಳಿ ಹಾಗೂ 16.90 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಅ.9ರಂದು ಮಲ್ಲಯ್ಯ ಸೊಪ್ಪಿಮಠ ಎಂಬವರ ಮನೆಯಲ್ಲಿ 160 ಗ್ರಾಂ ಬಂಗಾರ ಮತ್ತು 19.50 ಲಕ್ಷ ರೂ. ನಗದು ಕಳ್ಳತನ ಆಗಿದೆ ಎಂದು ಪ್ರಕರಣ ದಾಖಲಾಗಿತ್ತು ಈ ಬಗ್ಗೆ ತನಿಖೆ ನಡೆಸಿದ್ದು, ವಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಒಟ್ಟು ಮೂವರು ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಇಬ್ಬರರನ್ನು ಬಂಧಿಸಲಾಗಿದ್ದು,ಇನ್ನೊಬ್ಬ ಆರೋಪಿಯನ್ನು ಶೀಘ್ರ ಬಂಧಿಸಲಾಗುವುದೆಂದು ಹೇಳಿದರು.

ಆರೋಪಿಗಳ ಮೇಲೆ ಹಳೆಯ ನಾಲ್ಕು ಪ್ರಕರಣಗಳು ಸೇರಿ ಒಟ್ಟು ಎಂಟು ಪ್ರಕರಣ ಇವರ ಮೇಲೆ ಇವೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಂಧಿತರಿಂದ 13.66 ಲಕ್ಷ ರೂ. ಮೊತ್ತದ 182.2 ಗ್ರಾಂ ಬಂಗಾರ, 6,300ರೂ. ಮೌಲ್ಯದ 90 ಗ್ರಾಂ ಬೆಳ್ಳಿ ಹಾಗೂ 16.90 ಲಕ್ಷ ರೂ. ನಗದು ಸೇರಿ ಒಟ್ಟು 30.62 ಲಕ್ಷ ರೂ.ಮೊತ್ತದ ಆಭರಣ ಮತ್ತು ಹಣ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News