ಮಂಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ), ಬ್ಲಾಕ್ ಅಧ್ಯಕ್ಷರ ನೇಮಕಾತಿ, ಬ್ಲಾಕ್ ಪದಾಧಿಕಾರಿಗಳ ಪಟ್ಟಿ, ಮಂಡಲ್ ಅಧ್ಯಕ್ಷರ ನೇಮಕ ಹಾಗೂ ಬೂತ್ ಸಮಿತಿಗಳ ರಚನೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯು ಇಂದಿನಿಂದ (ಸೆ.28) ಸಂಘಟನ್ ಸೃಜನ್ ಅಭಿಯಾನ-2 (SSA-2) ಆರಂಭಿಸಿದೆ. ಅ.30ರವರೆಗೆ ನಡೆಯುವ ಈ ಅಭಿಯಾನಕ್ಕೆ ವೀಕ್ಷಕರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆದೇಶಿಸಿದ್ದಾರೆ.

ಉಡುಪಿ ಜಿಲ್ಲೆಗೆ ವೀಕ್ಷಕರಾಗಿ ನಾಲ್ವರನ್ನು ನೇಮಿಸಲಾಗಿದೆ.

ವಿಧಾನ ಪರಿಷತ್ ಸದಸ್ಯರೂ, ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆಯೂ ಆಗಿರುವ ಶಾಲೆಟ್ ಪಿಂಟೊ ಹಾಗೂ ಮಂಗಳೂರು ಮನಪಾ ಮಾಜಿ ಕಾರ್ಪೊರೇಟರ್ ಅಬ್ದುಲ್ ರವೂಫ್ ವೀಕ್ಷಕರಾಗಿರುವರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor