ಮೂರ್ಚೆ ರೋಗದಿಂದ ಯುವಕ ಮೃತ್ಯು
ಉಡುಪಿ, ಸೆ.27: ಮೂರ್ಚೆ ರೋಗದಿಂದ ಯುವಕನೋರ್ವ ಮೃತಪಟ್ಟ ಘಟನೆ ಸೆ.27ರಂದು ಬೆಳಗ್ಗೆ ಇಂದ್ರಾಳಿ ಸಮೀಪ ನಡೆದಿದೆ.
ಮೃತರನ್ನು ನಿಟ್ಟೂರಿನ ವಿನೋದ್(36) ಎಂದು ಗುರುತಿಸಲಾಗಿದೆ. ಉಡುಪಿಯಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಇವರಿಗೆ ಬಿ.ಪಿ ಇದ್ದು ಒಂದು ತಿಂಗಳ ಕಾಲ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದರು. ಇಂದ್ರಾಳಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿರುವಾಗ ಮೂರ್ಚೆ ರೋಗ ಬಂದು ಒದ್ದಾ ಡುತ್ತಿದ್ದು ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಹೋಗ ಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ವಿನೋದ್ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.