ಕಾರ್ಕಳ, ಸೆ.27: ಇರ್ವತ್ತೂರು ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಸೆ.25ರಂದು ಸಂಜೆ ವೇಳೆ ಕೋಳಿಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಿಯ್ಯಾರು ಗ್ರಾಮದ ಸುನಿಲ್ ಡಿಸೋಜ(39), ಹರೀಶ್ ಭಂಡಾರಿ (54), ರೆಂಜಾಳ ಗ್ರಾಮದ ಶ್ರೀನಿವಾಸ(38), ಮಂಗಳೂರು ಮಾರ್ಪಾಡಿ ಗ್ರಾಮದ ರಾಜೇಶ(31), ಅರುಣ ಇರ್ವತ್ತೂರು ಎಂದು ಗುರುತಿಸಲಾ ಗಿದೆ. ಬಂಧಿತರಿಂದ 1 ಹುಂಜ ಕೋಳಿ, ನಗದು 1600ರೂ., 2 ಬಾಳು ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor