ಉಡುಪಿ, ಸೆ.27: ಬ್ಯಾಂಕ್ ಪ್ರತಿನಿಧಿಗಳೆಂದು ಹೇಳಿಕೊಂಡು ಎಪಿಕೆ ಫೈಲ್ ಕಳುಹಿಸಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಕ್ಕಿಕಟ್ಟೆಯ ಅಜಯ್ ಜಗದೀಶ್ ಎಂಬವರಿಗೆ ಆ.27ರಂದು ಸಂಜೆ ವಾಟ್ಸಾಪ್ ನಂಬರಿನಲ್ಲಿ ಸೌತ್ ಇಂಡಿಯಾ ಬ್ಯಾಂಕ್‌ ಪ್ರತಿನಿಧಿ ಎಂದು ಹೇಳಿಕೊಂಡು ಶಿವಕುಮಾರ್ ಎಂಬಾತ ಕರೆ ಮಾಡಿದ್ದು, ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡುವಂತೆ ವಾಟ್ಸಾಪ್‌ನಲ್ಲಿ ಎಪಿಕೆ ಫೈಲ್‌ನೊಂದಿಗೆ ಸಂದೇಶ ಕಳುಹಿಸಿದನು. ಅದನ್ನು ನಂಬಿದ ಅಜಯ್ ವಾಟ್ಸಾಪ್ ಮೂಲಕ ನೀಡಿದ ಲಿಂಕ್‌ನಲ್ಲಿ ಸೌತ್ ಇಂಡಿಯನ್ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರವನ್ನು ಭರ್ತಿ ಮಾಡಿದರು.

ಆ ನಂತರ ಅಪರಿಚಿತರು ಅಜಯ್ ಖಾತೆಗೆ ದೈನಿಕ ಲಿಮಿಟ್ ಹೆಚ್ಚಿಸಲು ಹಣ ವರ್ಗಾವಣೆ ಮಾಡುವ ಬಗ್ಗೆ ಐ.ಸಿ.ಐ.ಸಿ.ಐ ಖಾತೆ ಸಂಖ್ಯೆಯನ್ನು ಪಡೆದುಕೊಂಡರು. ಬಳಿಕ ಅಪರಿಚಿತರು ವಿವಿಧ ಬೆನಿಫಿಷಿಯರಿ ಖಾತೆಗಳಿಗೆ ಅಜಯ್ ಅವರ ಐ.ಸಿ.ಐ.ಸಿ.ಐ ಬ್ಯಾಂಕ್ ಖಾತೆಯಿಂದ ಸೆ.2ರಂದು ಹಂತ ಹಂತವಾಗಿ ಒಟ್ಟು 17,50,000ರೂ. ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor