ಮಣಿಪಾಲ, ಸೆ.27: ಅಕ್ರಮವಾಗಿ ನಿಷೇದಿತ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಮಣಿಪಾಲ ಪೊಲೀಸರು ಸೆ.26ರಂದು ಸಂಜೆ ವೇಳೆ ಮಣಿಪಾಲದಲ್ಲಿ ಬಂಧಿಸಿದ್ದಾರೆ.

ಕಾಪುವಿನ ಸದಾನಂದ ಪೂಜಾರಿ(30) ಬಂಧಿತ ಆರೋಪಿ. ಈತ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಇರುವ ರೋಯಲ್ ಲೀಪ್ ಫ್ಯಾಮಿಲಿ ಪಾನ್ ಪಾರ್ಲರ್‌ನಲ್ಲಿ ಅಕ್ರಮವಾಗಿ ನಿಷೇದಿತ ಇ - ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದನು. ಈ ಕುರಿತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಸದಾನಂದ ಪೂಜಾರಿಯನ್ನು ಬಂಧಿಸಿ, ಆತ ಬಳಿ ಇದ್ದ ವಿವಿಧ ಬಗೆಯ ನಿಷೇದಿತ ಇ - ಸಿಗರೇಚ್‌ಗಳನ್ನು ಹಾಗೂ ನಗದನ್ನು ವಶಪಡಿಸಿಕೊಂಡಿ ದ್ದಾರೆ. ಇವುಗಳ ಒಟ್ಟು ಮೌಲ್ಯ29,580ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor