×
Ad

ಪಕ್ಷದೊಳಗಿನ ವಿರೋಧಿಗಳನ್ನು ಹುಡುಕುತ್ತಿರುವ ಬಿಜೆಪಿ ನಾಯಕರು: ಕಾಂಗ್ರೆಸ್ ವ್ಯಂಗ್ಯ

Update: 2023-06-27 22:58 IST

ಬೆಂಗಳೂರು, ಜೂ.27: ಬಿಜೆಪಿಯಲ್ಲಿ ಈಗ ಯಾರು ಯಾರ ದ್ವೇಷಿಗಳು ಎನ್ನುವುದು ಬಿಜೆಪಿಗರಿಗೇ ತಿಳಿದಂತಿಲ್ಲ. ವಿರೋಧ ಪಕ್ಷದ ನಾಯಕನನ್ನು ಹುಡುಕುವ ಬದಲು ಪಕ್ಷದೊಳಗಿನ ತಮ್ಮ ವಿರೋಧಿಗಳನ್ನು ಹುಡುಕುತ್ತಿದ್ದಾರೆ ಬಿಜೆಪಿ ನಾಯಕರು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೊಮ್ಮಾಯಿ/ಯತ್ನಾಳ್, ಯತ್ನಾಳ್/ನಿರಾಣಿ, ಈಶ್ವರಪ್ಪ/ವಲಸಿಗರು, ಪ್ರತಾಪ್‌ಸಿಂಹ/ ಬೊಮ್ಮಾಯಿ, ಸೋಮಣ್ಣ/ಸಂತೋಷ್, ಸಿ.ಟಿ.ರವಿ/ಬಿ.ಎಸ್.ಯಡಿಯೂರಪ್ಪ. ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ, ಮುಂದೆ ಆರೆಸ್ಸೆಸ್ ನವರ ಲಾಠಿ ಕಸಿದುಕೊಂಡು ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ ಎಂದು ಹೇಳಿದೆ.

ಚುನಾವಣೆಯ ಸೋಲಿನ ನಂತರ ಮರೆಗೆ ಸರಿದ ಜೋಶಿ-ಸಂತೋಷ್ ಜೋಡಿ ತೆರೆಯ ಹಿಂದೆ ಕುಳಿತು ಆಡಿಸುತ್ತಿರುವ ಗೊಂಬೆಯಾಟ ಇದು. ಆತ್ಮಾವಲೋಕನ ಸಭೆಗಳು ನಡೆಯುತ್ತಿರುವುದು ನೋಡಿದರೆ ಬಿಜೆಪಿ ಪಕ್ಷವೇ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

"ಪಕ್ಷದೊಳಗಿನ ಆಂತರಿಕ ಕಲಹವನ್ನು ನಿಭಾಯಿಸಲಾಗದ ನಳಿನ್ ಕುಮಾರ್ ಕಟೀಲ್ ಅವರದ್ದು ಅಸಾಮರ್ಥ್ಯ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯವಿದೆಯೇ? ಬಿಜೆಪಿಯಲ್ಲಿ ಎಲ್ಲರೂ ಸದಾ ಚೂರಿ ಹಿಡಿದುಕೊಂಡೆ ಓಡಾಡುತ್ತಿರುವಂತಿದೆ, ಪರಸ್ಪರ ಬೆನ್ನಿಗೆ ಚೂರಿ ಹಾಕಿಕೊಳ್ಳಲು" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News