Mandya | ಕಾರು ಅಪಘಾತ: ಮಾಜಿ ಶಾಸಕ ಕೆ.ಸುರೇಶ್‌ಗೌಡಗೆ ಗಾಯ
Update: 2026-02-22 16:59 IST
ಮಂಡ್ಯ: ಕಾರು ಅಪಘಾತದಲ್ಲಿ ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶ್‌ಗೌಡ ಹಾಗೂ ಚಾಲಕ ಶೇಖರ್ ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ತಾಲೂಕಿನ ಬಸರಾಳು ಗ್ರಾಮದ ಸಮೀಪ ನಡೆದಿದೆ.
ಮದ್ದೂರು ತಾಲೂಕು ಕೊಪ್ಪ ಸಮೀಪ ಮದುವೆ ಮುಗಿಸಿಕೊಂಡು ನಾಗಮಂಗಲಕ್ಕೆ ಬರುತ್ತಿದ್ದಾಗ ಬಸರಾಳು-ಕೊಪ್ಪ ರಸ್ತೆಯ ಬಂತೆಕೊಪ್ಪಲು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಉರುಳಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಚಾಲಕ ಶೇಖರ್ ಗಂಭೀರವಾಗಿ ಗಾಯಗೊಂಡಿದ್ದು, ಸುರೇಶ್ ಗೌಡ ಅವರ ಕೈ ಬೆರಳುಗಳು ಮುರಿದಿವೆ ಎನ್ನಲಾಗಿದೆ. ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.