ಮೈಸೂರು | ಸಿಜೆಐ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ವಕೀಲರು, ಪ್ರಗತಿಪರರಿಂದ ಪ್ರತಿಭಟನೆ
ಮೈಸೂರು : ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪ್ರಗತಿಪರರು ಹಾಗು ಮೈಸೂರು ವಕೀಲರ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸಿತು.
ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಬುಧವಾರ ಜಮಾಯಿಸಿದ ಪ್ರತಿಭಟನಾಕಾರರು ವಕೀಲ ರಾಕೇಶ್ ಕೊಶೋರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಸಿಜೆಐ ಅವರ ಮೇಲೆ ಶೂ ಎಸೆದ ಘಟನೆ ಸಂವಿಧಾನಕ್ಕೆ ಮಾಡಿದ ಅಪಮಾನ, ಈ ದೇಶದ ನಾಗರಿಕರೆಲ್ಲ ಈ ಘಟನೆಯನ್ನು ಒಕ್ಕೋರಲಿನಿಂದ ಖಂಡಿಸಬೇಕು. ಇಂತಹ ಘಟನೆ ದೇಶಕ್ಕೆ ಮಾರಕ ಎಂದು ಹೇಳಿದರು.
ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿರುವ ವಕೀಲ ರಾಕೇಶ್ ಕಿಶೋರ್ ಅವರನ್ನು ತನಿಖೆಗೆ ಒಳಪಡಿಸಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗಗೊಳ್ಳಬೇಕು, ಈತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಮುಖಂಡರುಗಳಾದ ಬಸವಲಿಂಗಯ್ಯ, ಹರಿಹರ ಆನಂದಸ್ವಾಮಿ, ಸವಿತಾ ಪ.ಮಲ್ಲೇಶ್, ಟಿ.ಗುರುರಾಜ್, ಉಗ್ರ ನರಸಿಂಹೇಗೌಡ, ಹೊಸಕೋಟೆ ಬಸವರಾಜು, ಜಗದೀಶ್ ಸೂರ್ಯ, ನೆಲೆ ಹಿನ್ನಲೆ ಗೋಪಾಲ್, ವಕೀಲರಾದ ಬಾಬುರಾಜ್, ಕಾಂತರಾಜು, ಪುಟ್ಟಸಿದ್ದೇಗೌಡ, ತಿಮ್ಮಯ್ಯ, ಎಸ್.ಪಿ.ಮಹೇಶ್, ಪ್ರೇಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.