×
Ad

ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿರುವುದೇ ದೇವೇಗೌಡ: ಸಿಎಂ ಸಿದ್ದರಾಮಯ್ಯ

Update: 2024-05-23 21:11 IST

ಮೈಸೂರು: ಭಾರತಕ್ಕೆ ವಾಪಸಾಗಿ ಪೊಲೀಸರಿಗೆ ಶರಣಾಗು ಎಂದು ಲೈಂಗಿಕ ಹಗರಣ ಆರೋಪಿ, ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಎಚ್‌.ಡಿ. ದೇವೇಗೌಡ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನನ್ನ ಪ್ರಕಾರ ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿರುವುದೇ ಎಚ್.ಡಿ. ದೇವೇಗೌಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ಮಂಡಕಳ್ಳಿ ವಿಮಾನದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಅವನನ್ನು ವಿದೇಶಕ್ಕೆ ಕಳುಹಿಸಿದ್ದು ಅವರೇ (ಎಚ್‌.ಡಿ. ದೇವೇಗೌಡ) ಅಲ್ವಾ, ಸಾರ್ವಜನಿಕವಾಗಿ ಅನುಕಂಪಗಳಿಸಲು ಪತ್ರ ಬರೆದಿದ್ದಾರೆ. ವಿದೇಶಕ್ಕೆ ಕಳುಹಿಸಿರುವುದು ಅವರೇ ಎಂದು ಸಿಎಂ ಹೇಳಿದರು.

ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಹಾಗೂ ಬಂಧನ ವಾರಂಟ್‌ ಎದುರಿಸುತ್ತಿರುವ ತಮ್ಮ ಮೊಮ್ಮಗನಿಗೆ ಜೆಡಿ(ಎಸ್)‌ ವರಿಷ್ಠ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಕಟು ಎಚ್ಚರಿಕೆ ನೀಡಿದ್ದು, “ಭಾರತಕ್ಕೆ ವಾಪಸಾಗು, ಪೊಲೀಸರಿಗೆ ಶರಣಾಗು, ಇಲ್ಲದೇ ಹೋದಲ್ಲಿ ನನ್ನ ಕೋಪಕ್ಕೆ ತುತ್ತಾಗುವೆ,” ಎಂದು ಪತ್ರ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News