×
Ad

ಎಸ್.ಎಲ್.ಭೈರಪ್ಪ ಅಂತಿಮ ದರ್ಶನ ಪಡೆದ ಸಾಹಿತ್ಯಾಭಿಮಾನಿಗಳು, ಗಣ್ಯರು

ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ

Update: 2025-09-26 00:18 IST

ಮೈಸೂರು: ಸಾಹಿತ್ಯಾಭಿಮಾನಿಗಳು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಎಸ್.ಎಲ್.ಭೈರಪ್ಪ ಅವರ ಪಾರ್ಥಿವ ಶರೀರವನ್ನು ಕಲಾಮಂದಿರದ ಕಿಂದರಿ ಜೋಗಿ ಆವರಣಕ್ಕೆ ಗುರುವಾರ ಸುಮಾರು 4 ಗಂಟೆ 15 ನಿಮಿಷಕ್ಕೆ ತರಲಾಯಿತು. ಒಡನಾಡಿಗಳು, ಹಿತೈಷಿಗಳು, ಸಾಹಿತಿಗಳು, ಲೇಖಕರು, ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್. ಶ್ರೀವತ್ಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ವಿವಿಧ ಪಕ್ಷಗಳ ಮುಖಂಡರು ಅಂತಿಮ ದರ್ಶನ ಪಡೆದರು.

ಪೊಲೀಸ್ ಬಿಗಿ ಭದ್ರತೆ:

ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಮಾರ್ ನೇತೃತ್ವದಲ್ಲಿ 80 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಸಾರ್ವಜನಿಕರ ಭೇಟಿಗೂ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ವಾಡಿದ್ದು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಡಿ.ಎಚ್.ಓ. ನೇತೃತ್ವದಲ್ಲಿ ಸುಸಜ್ಜಿತ ಸೌಲಭ್ಯ:

ಜೆಎಸ್‌ಎಸ್ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಪಾರ್ಥಿವ ಶರೀರವನ್ನು ಕಿಂದರಿಜೋಗಿ ಆವರಣದಿಂದ ಜೆ ಎಸ್ ಎಸ್ ಆಸ್ಪತ್ರೆ ಚೈತ್ಯಗಾರಕ್ಕೆ ಸ್ಥಳಾಂತರಿಸಿ ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಹೊರಟು ಮನೆಯಲ್ಲಿ ದರ್ಶನಕ್ಕೆ ಇರಿಸಿ ನಂತರ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ಆಗುವವರೆಗೂ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ರಂಗಾಯಣದ ನಾಟಕ ಪ್ರದರ್ಶನದ ಸಮಯವನ್ನು ಮುಂದೂಡಲಾಗಿತ್ತು. ಕಲಾಮಂದಿರದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ತಡವಾಗಿ ಆರಂಭವಾದವು.


 






 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News