×
Ad

ಮೈಸೂರು | ಭ್ರೂಣ ಲಿಂಗ ಪತ್ತೆ ಆರೋಪ : ಮಹಿಳೆ ಸೇರಿ 7 ಮಂದಿಯ ಬಂಧನ

Update: 2025-10-23 13:43 IST

ಮೈಸೂರು 3: ಮೈಸೂರು‌ ತಾಲ್ಲೂಕಿನ ಹನುಗನಹಳ್ಳಿ ಬಳಿಯ ಫಾರಂ ಹೌಸ್ ನಲ್ಲಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲದ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ದಾಳಿ ನಡೆಸಿದ್ದು, ಓರ್ವ ಮಹಿಳೆ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯ ಹನುಗನಹಳ್ಳಿ ಬಳಿಯ ಫಾರಂ ಹೌಸ್ ನ ಐಷಾರಾಮಿ ಬಂಗಲೆಯಲ್ಲಿ ಈ ಕೃತ್ಯ ನಡೆಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಕಳೆದ ಎರಡು ತಿಂಗಳಿನಿಂದ ಮಾಹಿತಿ ಕಲೆ‌ಹಾಕಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗುರುವಾರ ಬಳಿಗ್ಗೆ ಆರೋಗ್ಯ ಇಲಾಖೆ ಡಿಡಿ ವಿವೇಕ್, ಮಂಡ್ಯ ಡಿಎಚ್ ಓ ಮೋಹನ್, ಮೈಸೂರು ಡಿಎಚ್ ಓ ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ಇಂದು ಬೆಳಿಗ್ಗೆ 6.30 ರ ಸಮಯದಲ್ಲಿ ಗರ್ಭಿಣಿಯೊಂದಿಗೆ ತೆರಳಿದ್ದಾಗ ಭ್ರೂಣ ಲಿಂಗ ಪತ್ತೆ ಮಾಡುತ್ತಿರುವುದು ಕಂಡು ಬಂದಿದೆ.‌ ಈ ವೇಳೆ ತಪಾಸಣೆಗಾಗಿ ನಾಲ್ವರು ಮಹಿಳೆಯರು ಬಂದಿದ್ದರು ಎನ್ನಲಾಗಿದೆ. ಈ ವೇಳೆ ತಪಾಸಣೆ ಮಾಡುತ್ತಿದ್ದ ಕಿಟ್ ಗಳು ಸ್ಕ್ಯಾನಿಂಗ್‌ ಉಪಕರಣಗಳು ದೊರಕಿವೆ. ಜೊತೆಗೆ ಲಕ್ಷ ಗಟ್ಟಲೆ ಹಣವೂ ದೊರಕಿದೆ ಎಂದು ತಿಳಿದು ಬಂದಿದೆ.

ಬನ್ನೂರಿನ ಖಾಸಗಿ ನರ್ಸಿಂಗ್ ಹೋಂ ನಿಂದ ಈ ಕೃತ್ಯ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದ್ದು, ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News