×
Ad

ಮೈಸೂರು: ಮುಡಾ ಅಧ್ಯಕ್ಷ ಮರೀಗೌಡರಿಗೆ ಸಿಎಂ ಅಭಿಮಾನಿಗಳಿಂದ ಘೇರಾವ್

Update: 2024-09-27 14:22 IST

ಮೈಸೂರು: ಮುಡಾ ಹಗರಣಕ್ಕೆ ಮುಡಾ ಅಧ್ಯಕ್ಷ ಮರೀಗೌಡ ಕಾರಣ ಎಂದು ಸಿದ್ಧರಾಮಯ್ಯ ಅಭಿಮಾನಿಗಳು ಮರೀಗೌಡರಿಗೆ ಘೇರಾವ್ ಹಾಕಿ ಏರ್‌ಪೋರ್ಟ್‌ನಿಂದ ಹೊರಗೆ ಕಳುಹಿಸಿದ ಘಟನೆ ನಡೆದಿದೆ.

ಮುಡಾ ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶದ ನಂತರ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಿದ್ಧರಾಮಯ್ಯ ಅವರನ್ನು ಕಾಣಲು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮುಡಾ ಅಧ್ಯಕ್ಷ ಮರೀಗೌಡ ಸಹ ಆಗಮಿಸಿದ್ದರು.

ಸಿದ್ಧರಾಮಯ್ಯ ಅಗಮನಕ್ಕೂ ಮುನ್ನ ಮರೀಗೌಡ ಅವರನ್ನು ಸುತ್ತುವರಿದ ಕಾಂಗ್ರೆಸ್ ಕಾರ್ಯಕರ್ತರು, ಸಿದ್ಧರಾಮಯ್ಯ ಅಭಿಮಾನಿಗಳು, ʼಮುಡಾ ಹಗರಣಕ್ಕೆ ನೀನೇ ಕಾರಣ. ಏಕೆ ನೀನು ಇಲ್ಲಿಗೆ ಬಂದಿದ್ದೀಯ ಇಲ್ಲಿಂದ ಹೋಗುʼ ಎಂದು ಧಿಕ್ಕಾರ ಕೂಗಿದರು.

ಕಾರ್ಯಕರ್ತರನ್ನು ಸಮಾಧಾನ ಮಾಡಲು ಮರೀಗೌಡ ಯತ್ನಿಸಿದರಾದರೂ ಅಭಿಮಾನಿಗಳು ಮಾತ್ರ ಇದಕ್ಕೆ ಬಗ್ಗಲಿಲ್ಲ.‌ ಇದರಿಂದ ವಿಚಲಿತರಾದ ಮುಡಾ ಅಧ್ಯಕ್ಷ ಮರೀಗೌಡ ಕಾರು ಹತ್ತಿ ವಿಮಾನ ನಿಲ್ದಾಣದಿಂದ ಹೊರಟು ಹೋದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News