×
Ad

ವರುಣಾ: ಡಾ.ಯತೀಂದ್ರರಿಗೆ ಮುದ್ದುಬೀರನ ಹುಂಡಿ ಗ್ರಾಮಸ್ಥರಿಂದ ಘೇರಾವ್

Update: 2024-03-08 15:02 IST

ಮೈಸೂರು, ಮಾ.8: ಸಿಎಂ ಪುತ್ರ ಮಾಜಿ ಶಾಸಕ, ವರುಣಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ವರದಿಯಾಗಿದೆ.

ವರುಣಾ ಕ್ಷೇತ್ರ ವ್ಯಾಪ್ತಿಯ ಟಿ.ನರಸೀಪುರ ತಾಲ್ಲೂಕಿನ ಮುದ್ದುಬೀರನ ಹುಂಡಿ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗ್ರಾಮದಲ್ಲಿ ಕುಂದುಕೊರತೆ ಸಭೆ ನಡೆಸಲು ಡಾ.ಯತೀಂದ್ರ ತೆರಳಿದ್ದ ವೇಳೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.ಗ್ರಾಮದ ಅಭಿವೃದ್ಧಿ ಮತ್ತು ರಸ್ತೆ ಕಾಮಗಾರಿ ವಿಚಾರವಾಗಿ ತೀವ್ರ ತರಾಟೆಗೈದಿದ್ದಾರೆ.

ಗ್ರಾಮದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನೆಷ್ಟು ದಿನ ಬೇಕು ಇದನ್ನು ಪೂರ್ಣಗೊಳಿಸಲು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ಡಾ.ಯತೀಂದ್ರರನ್ನು ಅಲ್ಲಿಂದ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News