×
Ad

ಸಾಲಕ್ಕಾಗಿ ಕಬಿನಿ ಜಲಾಶಯದ ಭೂಮಿ ಅಡಮಾನ: ಸುಭಾಷ್ ಪವರ್ ಮ್ಯಾನೇಜ್‍ಮೆಂಟ್‍ಗೆ ಸಮನ್ಸ್ ಜಾರಿ

Update: 2025-06-23 13:30 IST

ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು ಬಿದರಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಭೂಮಿ ಅಡವಿಟ್ಟು ನೂರಾರು ಕೋಟಿ ಸಾಲ ಪಡೆದಿದ್ದ ಪ್ರಕರಣ, ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿ ಬದಲಿಸಿದ್ದ ಕೇಸ್‍ಗೆ ಸಂಬಂಧಿಸಿದಂತೆ ಸುಭಾಷ್ ಪವರ್ ಮ್ಯಾನೇಜ್‍ಮೆಂಟ್ ವಿರುದ್ಧ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಪ್ರಕರಣ ಸಂಬಂಧ ವಕೀಲ ಬಾಲಚಂದ್ರ ಎಂಬುವವರು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದು ಸುಭಾಷ್ ಪವರ್ ಮ್ಯಾನೇಜ್‍ಮೆಂಟ್‍ಗೆ ಜೂನ್ 28ನೇ ತಾರೀಖು ಖುದ್ದು ಹಾಜರಿಗೆ ಕೋರ್ಟ್ ಸಮನ್ಸ್ ಜಾರಿಮಾಡಿದೆ. ಪ್ರತಿನಿಧಿತ್ವ ರೆಪ್ರೆಸೆಂಟಿಟಿವ್ ಕ್ಯಾರೆಕ್ಟರ್ ಸೂಟ್ ಅಡಿ ಒಎಸ್ ದಾಖಲು ಮಾಡಲಾಗಿದ್ದು, 74/2025 ಕೇಸ್ ನಂ. ಬಾಲಚಂದ್ರ ಮತ್ತು ಚೀಫ್ ಸೆಕ್ರೆಟರಿ, ಕರ್ನಾಟಕ ಸ್ಟೇಟ್ ಚೀಫ್ ಸೆಕ್ರೆಟರಿ, ಕಾವೇರಿ ನೀರಾವರಿ ನಿಗಮದ ಸೂಪರಿಡೆಂಟ್ ಇಂಜಿನಿಯರ್, ಚೀಫ್ ಇಂಜಿನಿಯರ್, ಎಕ್ಸಿಕ್ಯುಟಿವ್ ಎಂಜಿನಿಯರ್, ಕಬಿನಿ ಎಇಇ ಚಂದ್ರಶೇಖರ್, ಸುಭಾಷ್ ಪವರ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್, ಸೆಂದಿಲ್, ಸೀನಿಯರ್ ಮ್ಯಾನೇಜರ್, ತಹಶಿಲ್ದಾರ್ ಮೋಹನಕುಮಾರಿ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಕಬಿನಿ ಜಲಾಶಯದ ಹೆಸರಿನ ಆರ್.ಟಿ.ಸಿ. ಯಲ್ಲಿ ಸುಭಾಷ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಎಂದು ದಾಖಲೆ ಪಡೆದು ಸಾಲ ಪಡೆಯಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿ ಬಳಿಕ ಆರ್.ಟಿ.ಸಿ. ಮರುಬದಲು ಮಾಡಲಾಗಿತ್ತು.

ಈ ನಡುವೆ ಇದೀಗ ಜೂನ್ 28 ರಂದು ಕೋರ್ಟ್‍ಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News