×
Ad

ಹಿರಿಯ ಪತ್ರಕರ್ತೆ ಶಾಹಿನಾ ಕೆ.ಕೆ. ಅವರಿಗೆ ಸಿಪಿಜೆ ಇಂಟರ್ ನ್ಯಾಷನಲ್ ಪ್ರೆಸ್‌ ಫ್ರೀಡಂ ಅವಾರ್ಡ್‌ 2023

Update: 2023-06-30 10:00 IST

ಫೋಟೋ: facebook.com/shahinanafeesa/ 

ಹೊಸದಿಲ್ಲಿ: ಔಟ್‌ಲುಕ್‌ ಮ್ಯಾಗಝೀನ್‌ನ ಹಿರಿಯ ಸಂಪಾದಕಿ ಶಾಹಿನಾ ಕೆ.ಕೆ. ಅವರು ಪ್ರತಿಷ್ಠಿತ ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್ಸ್‌ ನೀಡುವ ಇಂಟರ್‌ನ್ಯಾಷನಲ್‌ ಪ್ರೆಸ್‌ ಫ್ರೀಡಂ ಅವಾರ್ಡ್‌ 2023 ಕ್ಕೆ ಆಯ್ಕೆಯಾಗಿದ್ದಾರೆ. ಈ ವರ್ಷ ವಿವಿಧ ದೇಶಗಳಿಂದ ಆಯ್ಕೆಯಾದ ನಾಲ್ಕು ವಿಜೇತರಲ್ಲಿ ಶಾಹಿನಾ ಒಬ್ಬರಾಗಿದ್ದಾರೆ. ಜಗತ್ತಿನಾದ್ಯಂತದ ಧೈರ್ಯಶಾಲಿ ಪತ್ರಕರ್ತರನ್ನು ಗೌರವಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ನ್ಯೂಯಾರ್ಕ್‌ನಲ್ಲಿ ನವೆಂಬರ್‌ 16 ರಂದು ನಡೆಯಲಿದೆ.

ಶಾಹಿನಾ ಅವರು ಲಿಂಗ ಸಮಾನತೆ, ಮಾನವ ಹಕ್ಕುಗಳು ಹಾಗೂ ಶೋಷಿತ ವರ್ಗಗಳ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಮ್ಮ ವರದಿಗಳು ಹಾಗು ಲೇಖನಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಅತ್ಯಂತ ಕಠಿಣ ಉಗ್ರ-ನಿಗ್ರಹ ಕಾಯಿದೆಯಡಿ ಪ್ರಕರಣ ಎದುರಿಸಿದ ದೇಶದ ಮೊದಲ ಕೆಲ ಪತ್ರಕರ್ತರಲ್ಲಿ ಇವರೂ ಒಬ್ಬರಾಗಿದ್ದರು.

“ಪ್ರಶ್ನಾರ್ಹ ಪೊಲೀಸ್‌ ತನಿಖೆಯೊಂದರ ಕುರಿತು ಆಕೆ ವರದಿ ಮಾಡಿದ್ದನ್ನು ಪ್ರಶ್ನಿಸಿ ಸ್ಥಳೀಯ ಸರಕಾರಿ ಅಧಿಕಾರಿಗಳು 2010ರಲ್ಲಿ ದಾಖಲಿಸಿದ ಪ್ರಕರಣವೊಂದು ಇನ್ನಷ್ಟೇ ವಿಚಾರಣೆಯಾಗಬೇಕಾಗಿದೆ. ಸದ್ಯ ಜಾಮೀನಿನ ಮೇಲಿರುವ ಶಾಹಿನಾ ವಿರುದ್ಧದ ಆರೋಪ ಸಾಬೀತಾದರೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ಅವರಿಗಾಗಬಹುದು. ಮುಸ್ಲಿಂ ಸಮುದಾಯದವರಾಗಿರುವ ಶಾಹಿನಾ ಅವರು ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಇತರ ದುರ್ಬಲ ವರ್ಗಗಳ ಕುರಿತು ಮಾಡಿದ ವರದಿಗಳಿಂದ ಅವರ ದನಿಯನ್ನು ದಮನಿಸುವ ಯತ್ನವಾಗಿ ಭಾರತೀಯ ಪಲಪಂಥೀಯ ಗುಂಪುಗಳಿಂದ ವ್ಯಾಪಕ ಕಿರುಕುಳಕ್ಕೊಳಗಾಗಿದ್ದಾರೆ ” ಎಂದು ಸಿಪಿಜೆ ಹೇಳಿದೆ.

ಈ ವರ್ಷದ ಪ್ರೆಸ್‌ ಫ್ರೀಡಂ ಪ್ರಶಸ್ತಿ ಪಡೆದ ಇತರರ ಹೆಸರು ಇಂತಿವೆ: ಜಾರ್ಜಿಯಾದ ಎಂಟವರಿ ಅರ್ಖಿ ಪ್ರಸಾರ ಸಂಸ್ಥೆಯ ಸ್ಥಾಪಕಿ ನಿಕಾ ಗ್ವಾಮರಿಯಾ, ದಿ ಒಬ್ಸರ್ವರ್‌ ಸ್ಥಾಪಕಿ, ಸಂಪಾದಕಿ ಮೆಕ್ಸಿಕೋದ ಮರಿಯಾ ತೆರೆಸಾ ಮೊಂಟಾನೊ, ಹಾಗೂ ತನಿಖಾ ಪತ್ರಿಕೆ ಎಲ್‌ʼಆಲ್ಟರ್ನೇಟಿವ್‌ ಇದರ ನಿರ್ದೇಶಕ ಫರ್ಡಿನಾಂಡ್‌ ಆಯಿಟೆ (ಟೊಗೊ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News