×
Ad

ಪಹಲ್ಗಾಮ್ ದಾಳಿಯ ಬಳಿಕ ಭಾರತದಾದ್ಯಂತ 184 ಮುಸ್ಲಿಂ ವಿರೋಧಿ ದ್ವೇಷ ಘಟನೆಗಳು : ಎಪಿಸಿಆರ್‌ ವರದಿ

Update: 2025-05-14 16:39 IST

PC :  thequint.com

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ನಡೆದ ಮುಸ್ಲಿಮ್ ವಿರೋಧಿ ದ್ವೇಷ ಘಟನೆಗಳಲ್ಲಿ ಆತಂಕಕಾರಿ ಏರಿಕೆಯಾಗಿದೆ ಎಂದು ಅಸೋಸಿಯೇಷನ್‌ ಫಾರ್‌ ಪ್ರೊಟೆಕ್ಷನ್‌ ಆಫ್‌ ಸಿವಿಲ್‌ ರೈಟ್ಸ್‌(ಎಪಿಸಿಆರ್) ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ. 2025ರ ಎ.22ರಿಂದ ಮೇ 8ರವರೆಗಿನ ಅವಧಿಗೆ ಸಂಬಂಧಿಸಿದ ವರದಿಯು ದೇಶಾದ್ಯಂತ 184 ದ್ವೇಷ ಘಟನೆಗಳನ್ನು ದಾಖಲಿಸಿದ್ದು, ಈ ಪೈಕಿ 106 ಘಟನೆಗಳಿಗೆ ಪಹಲ್ಗಾಮ್ ದಾಳಿಯು ಪ್ರಚೋದಕ ಅಂಶವಾಗಿತ್ತು ಎನ್ನಲಾಗಿದೆ.

ಹಿಂಸಾಚಾರವು ಸ್ವಷ್ಟ ಮಾದರಿಗಳನ್ನು ಅನುಸರಿಸಿತ್ತು,ಅದು ಯಾದೃಚ್ಛಿಕವಾಗಿರಲಿಲ್ಲ ಅಥವಾ ಪ್ರತ್ಯೇಕವೂ ಆಗಿರಲಿಲ್ಲ. ಇದು ಹೆಚ್ಚುತ್ತಿರುವ ದ್ವೇಷದ ವ್ಯಾಪಕ ವಾತಾವರಣವನ್ನು ಸೂಚಿಸುತ್ತದೆ ಎಂದು ಎಪಿಸಿಆರ್ ಹೇಳಿದೆ.

ಅತ್ಯಂತ ಹೆಚ್ಚು ದ್ವೇಷ ಘಟನೆಗಳು ಉತ್ತರ ಪ್ರದೇಶ(43)ದಲ್ಲಿ ನಡೆದಿದ್ದರೆ ಮಹಾರಾಷ್ಟ್ರ ಮತ್ತು ಉತ್ತರಾಖಂಡದಲ್ಲಿ ತಲಾ 24, ಮಧ್ಯಪ್ರದೇಶದಲ್ಲಿ 20, ದಿಲ್ಲಿ, ಹಿಮಾಚಲ ಪ್ರದೇಶ ಮತ್ತು ಬಿಹಾರದಲ್ಲಿ ತಲಾ 6, ತೆಲಂಗಾಣದಲ್ಲಿ ಮೂರು, ಪಶ್ಚಿಮ ಬಂಗಾಳ ಮತ್ತು ಹರ್ಯಾಣದಲ್ಲಿ ತಲಾ ಒಂಭತ್ತು, ಪಂಜಾಬ್‌ನಲ್ಲಿ ನಾಲ್ಕು, ರಾಜಸ್ಥಾನದಲ್ಲಿ ಮೂರು, ಒಡಿಶಾ ಮತ್ತು ಅಸ್ಸಾಮಿನಲ್ಲಿ ತಲಾ ಒಂದು, ಜಮ್ಮುಕಾಶ್ಮೀರದಲ್ಲಿ ಎರಡು, ಕರ್ನಾಟಕ ಮತ್ತು ಛತ್ತೀಸಗಡದಲ್ಲಿ ತಲಾ ಆರು ಘಟನೆಗಳು ನಡೆದಿವೆ.

ವರದಿಯು 84 ಪ್ರಕರಣಗಳನ್ನು ದ್ವೇಷ ಭಾಷಣ, 78ನ್ನು ಬೆದರಿಕೆ, 42ನ್ನು ಕಿರುಕುಳ, 39ನ್ನು ಹಲ್ಲೆ, 19ನ್ನು ವಿಧ್ವಂಸಕ ಕೃತ್ಯ, 7ನ್ನು ಮೌಖಿಕ ನಿಂದನೆ ಮತ್ತು ಮೂರನ್ನು ಕೊಲೆ ಎಂದು ವರ್ಗೀಕರಿಸಿದೆ.

  (Source: APCR report)

(Source: The Quint through APCR report)

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಪಿಸಿಆರ್ ತಂಡದ ಸದಸ್ಯೆ ತಝೀನ್ ಜುನೈದ್ ಅವರು, ಹಿಂಸಾಚಾರಕ್ಕೆ ಪಹಲ್ಗಾಮ್ ದಾಳಿಯೊಂದೇ ಕಾರಣವಾಗಿರಲಿಲ್ಲ, ಬದಲಾಗಿ ಅದು ಕೋಮುದ್ವೇಷದ ದೊಡ್ಡ ಮಾದರಿಯ ಒಂದು ಭಾಗವಾಗಿತ್ತು. ಸಾಮಾನ್ಯವಾಗಿ ದ್ವೇಷಾಪರಾಧಗಳು ಪ್ರತ್ಯೇಕವಾಗಿ ಸಂಭವಿಸುವುದಿಲ್ಲ, ಅದಕ್ಕೆ ಕೆಲವು ಸಂದರ್ಭಗಳಿವೆ, ಕೆಲವು ಪೂರ್ವ ಸಿದ್ಧತೆಗಳಿವೆ ಎಂದು ಹೇಳಿದರು.

ದಾಳಿಯ ನಂತರದ ವಾರದಲ್ಲಿ ದ್ವೇಷ ಘಟನೆಗಳಲ್ಲಿ ಹೆಚ್ಚಳವನ್ನು ಎಪಿಸಿಆರ್ ಗಮನಿಸಿದೆ. ಆದರೆ ಕೆಲವು ದಿನಗಳ ಬಳಿಕ,ವಿಶೇಷವಾಗಿ ಅಂಬಾಲಾದಲ್ಲಿ ಗುಂಪೊಂದು ‘ಜೈ ಶ್ರೀರಾಮ್’ಘೋಷಣೆಯನ್ನು ಕೂಗುತ್ತ ಮುಸ್ಲಿಮರ ಒಡೆತನದ ಅಂಗಡಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಘಟನೆಯ ಬಳಿಕ ಈ ಏರಿಕೆ ಎದ್ದು ಕಾಣುತ್ತಿದೆ. ಈ ಘಟನೆಯ ನಂತರ ದ್ವೇಷ ಘಟನೆಗಳಲ್ಲಿ ಬಲಪಂಥೀಯ ಸಂಘಟನೆಗಳು ಭಾಗಿಯಾಗಿದ್ದು ಹೆಚ್ಚು ಸ್ಪಷ್ಟವಾಗಿತ್ತು ಎಂದು ಎಪಿಸಿಆರ್ ಹೇಳಿದೆ.

(Photo: X/Twitter)

 

ದೈಹಿಕ ಹಿಂಸಾಚಾರ ನಡೆದಿರದ ಸ್ಥಳಗಳಲ್ಲಿಯೂ ಪಹಲ್ಗಾಮ್ ದಾಳಿಯ ಉಲ್ಲೇಖಗಳು ಸಾಮಾನ್ಯವಾಗಿದ್ದವು. ಮುಸ್ಲಿಮ್ ವ್ಯಾಪಾರಿಗಳ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ನೀಡಲಾಗಿದ್ದ ಕರೆಗಳಲ್ಲಿಯೂ ಪಹಲ್ಗಾಮ್ ಉಲ್ಲೇಖಗಳು ಬಹಳ ಸ್ಪಷ್ಟವಾಗಿದ್ದವು. ಮುಸ್ಲಿಮರನ್ನು ಭಯೋತ್ಪಾದಕರೆಂದು ಕರೆಯುವುದೂ ಅತ್ಯಂತ ಸ್ಪಷ್ಟವಾಗಿತ್ತು ಎಂದು ಜುನೈದ್ ಹೇಳಿದರು.

(Source: APCR Report)

 

ಎ.23ರಂದು ಜಮ್ಮುಕಾಶ್ಮೀರದ ಇಬ್ಬರು ಶಾಲು ಮಾರಾಟಗಾರರ ಮೇಲೆ ನಡೆದ ಹಲ್ಲೆ, ಉತ್ತರಾಖಂಡದಿಂದ ಕಾಶ್ಮೀರಿಗಳನ್ನು ಹೊರದಬ್ಬಲು ಹಿಂದು ರಕ್ಷಾ ದಳದ ಕರೆ ಇವು ದ್ವೇಷ ಘಟನೆಗಳ ಕೆಲವು ನಿದರ್ಶನಗಳು.

ಪಶ್ಚಿಮ ಬಂಗಾಳದಲ್ಲಿ ಮಹೇಶತಲಾದಲ್ಲಿ ಪಹಲ್ಗಾಮ್ ದಾಳಿಯ ಬಳಿಕ ಮುಸ್ಲಿಮ್ ಗರ್ಭಿಣಿಯೋರ್ವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ನಿರಾಕರಿಸಿದ್ದ ಸ್ತ್ರೀರೋಗ ತಜ್ಞೆ ಆಕೆಯನ್ನು ಉದ್ದೇಶಿಸಿ ದ್ವೇಷದ ಮಾತುಗಳನ್ನಾಡಿದ್ದರು.

Full View

ಆಪರೇಷನ್ ಸಿಂಧೂರ ಆರಂಭಗೊಂಡ ಬಳಿಕ ದ್ವೇಷಾಪರಾಧಗಳಲ್ಲಿ ಏನಾದರೂ ಇಳಿಕೆಯಾಗಿದೆಯೇ ಎಂಬ ಪ್ರಶ್ನೆಗೆ ಜುನೈದ್, ‘ಈಗಲೇ ಆ ಬಗ್ಗೆ ನಿರ್ಧರಿಸುವುದು ಅವಸರವಾಗುತ್ತದೆ. ದ್ವೇಷ ಘಟನೆಗಳು ಇಳಿಕೆಯಾಗಿರಬಹುದು. ಆದರೆ ಅದು ನಿಜವಾದ ಇಳಿಕೆಯೋ ಅಥವಾ ವರದಿ ಮಾಡುವಲ್ಲಿ ವಿಳಂಬವೋ ಎನ್ನುವುದನ್ನು ಹೇಳುವುದು ಕಷ್ಟ’ ಎಂದು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News