×
Ad

ಬಿಹಾರ: ಮತದಾರರ ಪಟ್ಟಿಯಿಂದ 56 ಲಕ್ಷ ಮಂದಿ ಔಟ್!

Update: 2025-07-24 08:00 IST

PC: PTI

ಹೊಸದಿಲ್ಲಿ: ನವೆಂಬರ್ ನಲ್ಲಿ ಚುನಾವಣೆ ನಡೆಯುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಡಿ ಗಣತಿ ಅರ್ಜಿಗಳನ್ನು ಸಲ್ಲಿಸಲು ಕೇವಲ ಎರಡು ದಿನ ಬಾಕಿ ಉಳಿದಿದ್ದು, ಹಿಂದಿನ ಮತದಾರರ ಪಟ್ಟಿಯಲ್ಲಿದ್ದ ಸುಮಾರು ಒಂದು ಲಕ್ಷ ಮಂದಿ "ಪತ್ತೆಯಾಗಿಲ್ಲ" ಮತ್ತು ಇತರ 55 ಲಕ್ಷ ಮಂದಿಯನ್ನು ಮೃತಪಟ್ಟವರು, ಕಾಯಂ ವಲಸೆ ಹೋದವರು ಅಥವಾ ಹಲವು ಕಡೆಗಳಲ್ಲಿ ನೋಂದಾಯಿಸಲ್ಪಟ್ಟವರು ಎಂದು ಪರಿಗಣಿಸಲಾಗಿದೆ.

ಕಳೆದ ಜೂನ್ 24ರ ವೇಳೆಗೆ ಮತದಾರರ ಪಟ್ಟಿಯಲ್ಲಿದ 7.9 ಕೋಟಿ ಮತದಾರರ ಪೈಕಿ ಶೇಕಡ 7ರಷ್ಟು ಅಂದರೆ 56 ಲಕ್ಷ ಮತದಾರರು "ತಪ್ಪಾಗಿ ಮತದಾರರಾಗಿ ಸೇರ್ಪಡೆಯಾಗಿದ್ದಾರೆ" ಮತ್ತು ಇವರು ಮುಂದಿನ ಮತದಾನದಲ್ಲಿ ನಕಲಿ ಮತದಾನ ಮಾಡುವ ಅಪಾಯ ಇತ್ತು ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಅಸ್ತಿತ್ವದಲ್ಲಿಲ್ಲ"ದ ಸುಮಾರು ಒಂದು ಲಕ್ಷ ಮಂದಿ ಬಹುಶಃ ಅಕ್ರಮ ವಲಸೆಗಾರರಾಗಿರಬೇಕು ಹಾಗೂ ಬಂಗಾಳದಂಥ ಪಕ್ಕದ ರಾಜ್ಯಗಳಲ್ಲಿ ವಾಸವಿದ್ದು, ಲಂಚ ವಿಧಾನದ ಮೂಲಕ ಅಥವಾ ಪರಿಶೀಲನೆಯ ಕೊರತೆಯಿಂದಾಗಿ ಬಿಹಾರದಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಆಗಸ್ಟ್ 1ರಂದು ಪ್ರಕಟಿಸಲಾಗುವ ಕರಡು ಮತದಾರರ ಪಟ್ಟಿಯಲ್ಲಿ ಈ 56 ಲಕ್ಷ ಮಂದಿಯ ಹೆಸರು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ ಹೇಳಿಕೆ ನೀಡಿರುವ ಚುನಾವಣಾ ಆಯೋಗ, ಬುಧವಾರದ ವರೆಗೆ ಶೇಕಡ 98ರಷ್ಟು ಮತದಾರರನ್ನು ತಲುಪಲಾಗಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News