×
Ad

ಮುಂಬೈ | ಹಲವು ವಾಹನಗಳಿಗೆ ಟ್ರಕ್ ಢಿಕ್ಕಿ : 8 ಮಂದಿ ಮೃತ್ಯು, ಹಲವರಿಗೆ ಗಾಯ

Update: 2025-11-13 23:36 IST

Photo Credit : NDTV 

ಮುಂಬೈ, ನ.13: ಪುಣೆಯ ನವಲೆ ಸೇತುವೆಯ ಸಮೀಪ ಗುರುವಾರ ವೇಗವಾಗಿ ಬಂದ ಟ್ರಕ್‌ವೊಂದು ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. 20 ಜನರು ಗಾಯಗೊಂಡಿದ್ದಾರೆ.  

ಈ ಘಟನೆ ಸಿನ್ಹಗಡ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿಯಲ್ಲಿರುವ ಸೆಲ್ಫಿ ಪಾಯಿಂಟ್ ಸಮೀಪ ಸಂಭವಿಸಿದೆ. ಅಪಘಾತದಲ್ಲಿ ಟ್ರಕ್ 8 ವಾಹನಗಳಿಗೆ ಢಿಕ್ಕಿಯಾಗಿದೆ. ಇದರಿಂದ 2 ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪುಣೆ ನಗರ ಪೊಲೀಸರು ತಿಳಿಸಿದ್ದಾರೆ.

‘‘ಅಪಘಾತದಲ್ಲಿ ಕನಿಷ್ಠ8 ಮಂದಿ ಮೃತಪಟ್ಟಿದ್ದಾರೆ  ಹಾಗೂ ಹಲವರು ಗಾಯಗೊಂಡಿದ್ದಾರೆ’’ ಎಂದು ಉಪ ಪೊಲೀಸ್ ಆಯುಕ್ತ ಸಂಭಾಜಿ ಕದಮ್ ದೃಢಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News