ಶಿವಸೇನೆಯ ಶಿಂದೆ ಬಣ ಸೇರಿದ ನಟ ಗೋವಿಂದ

Update: 2024-03-28 12:37 GMT

Photo : X/@ANI

ಮುಂಬೈ : ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ ಶಿವಸೇನೆ ಶಿಂದೆ ಬಣಕ್ಕೆ ಗುರುವಾರ ಸೇರ್ಪಡೆಯಾಗಿದ್ದಾರೆ.

́ಕೂಲಿ ನಂ.1ʼ, ʼರಾಜಾ ಬಾಬೂʼ, ʼದೀವಾನಾ ಮಸ್ತಾನಾʼ, ʼಹೀರೋ ನಂ.1, ʼಹಸೀನಾ ಮಾನ್ ಜಾಯೇಗಿʼ ಮುಂತಾದ ಹಿಟ್ ಚಿತ್ರಗಳ ಮೂಲಕ ಬಾಲಿವುಡ್ ಮನಗೆದ್ದ ನಟ, ಕಾಮಿಡಿಯನ್ ಗೋವಿಂದ ಅವರು ಭಾರತೀಯ ಚಿತ್ರರಂಗದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದಾರೆ.

2004 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಮುಂಬೈ ಉತ್ತರದಿಂದ ಸಂಸದರಾಗಿದ್ದ ಗೋವಿಂದ, ಬಳಿಕ ತಾನು ಸಿನೆಮಾ ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ರಾಜಕೀಯದಿಂದ ದೂರವಿದ್ದರು. 2009ರ ವರೆಗೆ ತಮ್ಮ ಸಂಸತ್ ಅವಧಿ ಮುಗಿದ ಬಳಿಕ ರಾಜಕೀಯ ಜೀವನ ಬೇಡ ಎಂದು ದೂರ ಸರಿದಿದ್ದರು.

ಈಗ ಲೋಕ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಗೋವಿಂದ ಅವರು ಶಿವಸೇನೆಯ ಏಕನಾಥ್ ಶಿಂದೆ ಬಣ ಸೇರಿ ರಾಜಕೀಯದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ. ಗೋವಿಂದ ಅವರು ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News