×
Ad

ಏರ್ ಇಂಡಿಯಾ ವಿಮಾನ ದುರಂತ | ಇಂಧನ ಸ್ವಿಚ್‌ಗಳನ್ನು ಪರಿಶೀಲನೆ ನಡೆಸಿರಲಿಲ್ಲ : ಎಎಐಬಿ‌ ವರದಿ

Update: 2025-07-14 17:02 IST

Photo credit: PTI

ಹೊಸದಿಲ್ಲಿ: ಅಹಮದಾಬಾದ್‌ನಲ್ಲಿ ಪತನವಾದ ಬಿ–787 ವಿಮಾನದಲ್ಲಿನ ಇಂಧನ ಸ್ವಿಚ್‌ಗಳನ್ನು ಪರಿಶೀಲನೆ ನಡೆಸಿರಲಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೊ(ಎಎಐಬಿ) ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

ಬೋಯಿಂಗ್ ಬಿ–787 ಸರಣಿಯ ವಿಮಾನದ ಎಂಜಿನ್‌ಗಳ ಇಂಧನ ಸ್ವಿಚ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಅಮೆರಿಕದ ಫೆಡರಲ್ ವಿಮಾನಯಾನ ಸಂಸ್ಥೆ (ಎಫ್ಎಎ) 2018ರಲ್ಲೇ ಮಾಹಿತಿ ನೀಡಿತ್ತು ಮತ್ತು ಅವುಗಳನ್ನು ಬದಲಿಸುವಂತೆ ಸೂಚಿಸಿತ್ತು ಎಂದು ವರದಿಯಾಗಿದೆ.

ಬೋಯಿಂಗ್ 737 ಸರಣಿಯ ವಿಮಾನಗಳ ಇಂಧನ ಸ್ವಿಚ್‌ನಲ್ಲಿ ತಾಂತ್ರಿಕ ಸಮಸ್ಯೆಯಿದೆ. ಈ ಸ್ವಿಚ್‌ಗಳಲ್ಲಿ ‘ರನ್’ (ಎಂಜಿನ್‌ಗೆ ಇಂಧನ ಪೂರೈಸುವ ಸ್ಥಿತಿ) ಸ್ಥಿತಿಯಲ್ಲಿ ಇದ್ದಾಗ, ಅವು ಲಾಕ್ ಆಗಿರುತ್ತವೆ. ಸ್ವಿಚ್‌ಗಳನ್ನು ‘ರನ್’ ಸ್ಥಿತಿಯಿಂದ, ‘ಕಟ್ ಆಫ್’ (ಇಂಧನ ಪೂರೈಕೆ ಸ್ಥಗಿತ) ಸ್ಥಿತಿಗೆ ತರುವುದಕ್ಕೂ ಮೊದಲು ಲಾಕ್ ತೆರೆಯಬೇಕಾಗುತ್ತದೆ. ಪೈಲಟ್ ಗಳು ಏನೂ ಮಾಡದಿದ್ದರೂ ಈ ಲಾಕ್‌ಗಳು ತನ್ನಿಂದ ತಾನೇ ತೆರೆದುಕೊಳ್ಳುತ್ತಿದ್ದವು. ಅಪ್ಪಿತಪ್ಪಿಯೇನಾದರೂ ಸ್ವಿಚ್‌ನ ಲಿವರ್‌ಗೆ ಪೈಲಟ್‌ಗಳ ಕೈ ತಾಗಿದರೆ ದಿಢೀರ್ ‘ಕಟ್ ಆಫ್’ ಸ್ಥಿತಿಗೆ ಬದಲಾಗುತ್ತದೆ. ಇದು ಅತ್ಯಂತ ಅಪಾಯಕಾರಿಯಾಗಿ ಎಂದು ಎಫ್ಎಎ ಕಳವಳ ವ್ಯಕ್ತಪಡಿಸಿತ್ತು.

ʼಅಹಮದಾಬಾದ್‌ನಲ್ಲಿ ಪತನವಾದ ಬಿ–787 ವಿಮಾನದಲ್ಲೂ ಇದೇ ಸ್ವಿಚ್ ಇತ್ತು. ಅವುಗಳು ಸರಿಯಾಗಿತ್ತಾ ಎಂಬುದರ ಬಗ್ಗೆ ಏರ್ ಇಂಡಿಯಾ ಪರಿಶೀಲನೆ ನಡೆಸಿರಲಿಲ್ಲ. ಇಂಧನ ಪೂರೈಕೆಯ ಸ್ವಿಚ್‌ಗಳು ‘ಕಟ್ ಆಫ್’ ಸ್ಥಿತಿಗೆ ಬಂದಿದ್ದರಿಂದ ಏರ್ ಇಂಡಿಯಾ ವಿಮಾನದ ಎಂಜಿನ್‌ಗಳು ಸ್ಥಗಿತವಾಗಿದೆ ಎಂದು ಎಂದು ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಪ್ರಾಥಮಿಕ ವರದಿಯಲ್ಲಿ ತಿಳಿಸಿತ್ತು.

ಆದರೆ, ಪೈಲಟ್‌ಗಳು ಸ್ವಿಚ್‌ಗಳ ಸ್ಥಿತಿ ಬದಲಾಯಿಸಿದ್ದಾರಾ ಅಥವಾ ತಾಂತ್ರಿಕ ಸಮಸ್ಯೆಯಿಂದ ಸ್ವಿಚ್‌ಗಳು ‘ಕಟ್ ಆಫ್’ ಸ್ಥಿತಿಗೆ ತಲುಪಿದೆಯಾ ಎಂಬ ಬಗ್ಗೆ ವರದಿಯಲ್ಲಿ ಯಾವುದೇ ಮಾಹಿತಿ ಇರಲಿಲ್ಲ.

ಇದರ ಬೆನ್ನಲ್ಲೇ ಬೋಯಿಂಗ್ ವಿಮಾನಗಳ ಇಂಧನ ಸ್ವಿಚ್ ಲಾಕ್‌ಗಳು ಸುರಕ್ಷಿತವಾಗಿವೆ ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಮತ್ತು ಬೋಯಿಂಗ್ ತಿಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News