×
Ad

ಆಂಧ್ರಪ್ರದೇಶ: ಶಾಲೆಯ ಪೊದೆ ಬಳಿ ಮಹಿಳೆಯ ಮೃತದೇಹ ಪತ್ತೆ; ಅತ್ಯಾಚಾರ ಶಂಕೆ

Update: 2024-06-22 08:04 IST

ಹೈದರಾಬಾದ್: ಆಂಧ್ರಪ್ರದೇಶದ ಪುಟ್ಟಹಳ್ಳಿಯ ಹೆಣ್ಣುಮಕ್ಕಳ ಪ್ರೌಢಶಾಲೆ ಬಳಿ ಪೊದೆಯಲ್ಲಿ ಶುಕ್ರವಾರ 21 ವರ್ಷ ವಯಸ್ಸಿನ ಮಹಿಳೆಯ ಶವ ನಗ್ನಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಮಹಿಳೆಯ ಹತ್ಯೆಗೆ ಮುನ್ನ ಅತ್ಯಾಚಾರ ನಡೆದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಬಾಪಟ್ಲಾ ಜಿಲ್ಲೆಯ ಎಪುರುಪಲೇಂ ಗ್ರಾಮದ ಮಹಿಳೆ ಬೆಳಿಗ್ಗೆ ಶೌಚಕ್ಕಾಗಿ ರೈಲು ಹಳಿ ಪಕ್ಕದಲ್ಲಿರುವ ಶಾಲೆಯ ಬಳಿ ತೆರಳಿದ್ದರು. ಆದರೆ ಆ ಬಳಿಕ ವಾಪಸ್ಸಾಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮುಂಜಾನೆ 5.30 ರಿಂದ 5.45ರ ವೇಳೆ ಮನೆಯಿಂದ ಹೊರಟಿದ್ದ ಮಹಿಳೆ ಬಾರದೇ ಇದ್ದಾಗ, ಕುಟುಂಬದವರು ಹುಡುಕಾಟ ಆರಂಭಿಸಿದರು. ಈ ವೇಳೆ ಆಕೆಯ ಮೃತದೇಹ ಪೊದೆಯಲ್ಲಿ ಪತ್ತೆಯಾಯಿತು ಎಂದು ಬಾಪಟ್ಲಾ ಜಿಲ್ಲೆಯ ಎಸ್ಪಿ ವಕುಲ್ ಜಿಂದಾಲ್ ಹೇಳಿದ್ದಾರೆ.

ಈ ಶಂಕಿತ ಅತ್ಯಾಚಾರ ಮತ್ತು ಮಹಿಳೆಯ ಹತ್ಯಾ ಪ್ರಕರಣವನ್ನು ಬೇಧಿಸಲು ಐದು ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ತಕ್ಷಣ ಗ್ರಾಮಕ್ಕೆ ಭೇಟಿ ನೀಡುವಂತೆ ಗೃಹ ಸಚಿವರಾದ ವಂಗಲಪುಡಿ ಅನಿತಾ ಅವರಿಗೆ ಸಿಎಂ ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ.

ಮಾದಕ ವಸ್ತು ವ್ಯಸನದಿಂದಾಗಿ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ಈ ಕೃತ್ಯ ಎಸಗಿದವರನ್ನು 48 ಗಂಟೆಗಳ ಒಳಗಾಗಿ ಬಂಧಿಸಲಾಗುವುದು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಅನಿತಾ ತಿಳಿಸಿದ್ದಾರೆ.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News