×
Ad

ಸಬಿಯಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ ಅಂಕುರ್ ಚೌಹಾಣ್‌ | ಪ್ರೀತಿಸಿ ಮತಾಂತರವಾಗಿದ್ದವಳ ದುರಂತ ಅಂತ್ಯ

Update: 2024-09-05 13:53 IST

Photo : Aaj tak

ಮೊರಾದಾಬಾದ್ : ಮೊರಾದಾಬಾದ್ ನಲ್ಲಿ 9 ವರ್ಷಗಳ ಹಿಂದಿನ ಪ್ರೇಮಕಥೆ ರವಿವಾರ ದುರಂತ ಅಂತ್ಯ ಕಂಡಿದೆ. ಸುರ್ಜನ್ ನಗರದ ನಿವಾಸಿ ಸಬಿಯಾ ತನ್ನ ಪ್ರಿಯಕರನಿಗೆ ಸಾಕ್ಷಿ ಚೌಹಾಣ್ ಆಗಿ ಮತಾಂತರಗೊಂಡಿದ್ದಳು. ಆದರೆ ಇದೀಗ ಪತಿ ಅಂಕುರ್ ಆಕೆಯ ಮೇಲೆ ಅನುಮಾನ ಪಟ್ಟು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಸುರ್ಜನ್ ನಗರದ ನಿವಾಸಿ ಸಬಿಯಾಳನ್ನು ಪ್ರೀತಿಸಿ ಸಾಕ್ಷಿ ಚೌಹಾಣ್ ಆಗಿ ಅಂಕುರ್ ಮತಾಂತರ ಮಾಡಿಸಿದ್ದ. ದಂಪತಿಗೆ ಈಗ 7 ವರ್ಷದ ಮಗಳು ದುವಾ ಕೂಡ ಇದ್ದಾಳೆ.

ಠಾಕುರ್ದ್ವಾರದ ಸುರ್ಜನ್ ನಗರದಲ್ಲಿ ಖಾರಿ ಹನೀಫ್ ಅವರ ಕುಟುಂಬವು ವಾಸಿಸುತ್ತಿದೆ. ವಿಜೇಂದ್ರ ಚೌಹಾಣ್ ಅವರ ಕುಟುಂಬವೂ ಅವರ ಮನೆಯಿಂದ 50 ಮೀಟರ್ ದೂರದಲ್ಲಿ ವಾಸಿಸುತ್ತಿದೆ. 9 ವರ್ಷಗಳ ಹಿಂದೆ ಖಾರಿ ಹನೀಫ್ ಅವರ ಪುತ್ರಿ ಸಾದಿಯಾಳ ಜೊತೆ ವಿಜೇಂದ್ರ ಅವರ ಮಗ ಅಂಕುರ್ ಚೌಹಾಣ್‌ ನಡುವಿನ ಪ್ರೀತಿಯ ವಿಷಯ ಮನೆಯವರಿಗೆ ಗೊತ್ತಾಗಿತ್ತು. ಆ ಬಳಿಕ ಸಾಬಿಯಾಳನ್ನು ಮನೆಯಿಂದ ಹೊರಗೆ ಹೋಗದಂತೆ ನಿರ್ಬಂಧ ಕೂಡ ವಿಧಿಸಲಾಗಿತ್ತು. ಆದರೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಸಬಿಯಾಳನ್ನು ಸಾಕ್ಷಿಯಾಗಿ ಮತಾಂತರ ಕೂಡ ಮಾಡಲಾಗಿತ್ತು. ಆ ಬಳಿಕ ಇಬ್ಬರು ಮಜೋಲಾ ಪ್ರದೇಶದ ಗಗನ್ನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು.

ಅಂಕುರ್ ಚೌಹಾಣ್‌ ಆರಂಭದಲ್ಲಿ ಕೆಲಸಕ್ಕೆ ಹೋಗುತ್ತಿದ್ದ, ಆದರೆ ಕಾಲ ಕ್ರಮೇಣ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿಬಿಟ್ಟ. ಇದರಿಂದ ಸಂಸಾರದ ನಿರ್ವಹಣೆಗೆ ತೊಂದರೆಯಾಗಿದೆ. ಆ ಬಳಿಕ ಚೌಹನ್ ಪತ್ನಿಯನ್ನೇ ಕೆಲಸಕ್ಕೆ ಕಳುಹಿಸಿದ್ದಾನೆ. ಸಾದಿಯಾ ಅಲಿಯಾಸ್ ಸಾಕ್ಷಿ ಚೌಹಾಣ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ. ಕೆಲಸದ ಒತ್ತಡದಿಂದ ಸಾಕ್ಷಿ ಕೆಲವೊಮ್ಮೆ ಮನೆಗೆ ತಡವಾಗಿ ಬರುತ್ತಿದ್ದರು. ಹೆಚ್ಚು ತಡವಾದಾಗ ಕೆಲವೊಮ್ಮೆ ಯಾರೋ ಒಬ್ಬರು ಕಾರ್ಖಾನೆಯಿಂದ ಬಿಡಲು ಬರುತ್ತಿದ್ದರು.

ಈ ಕಾರಣದಿಂದ ಅಂಕುರ್ ಚೌಹಾಣ್ ತನ್ನ ಪತ್ನಿಯನ್ನು ಅನುಮಾನಿಸಲು ಆರಂಭಿಸಿದ್ದ. ಪ್ರತಿದಿನ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಪೋಷಕರ ನಡುವಿನ ಜಗಳ ನೋಡಿ 7 ವರ್ಷದ ಮಗಳು ದುವಾ ಅಳುತ್ತಿದ್ದಳು. ಶನಿವಾರ ರಾತ್ರಿಯೂ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಅಂಕುರ್ ತನ್ನ ಪತ್ನಿ ಸಾದಿಯಾ ಅಲಿಯಾಸ್ ಸಾಕ್ಷಿ ಚೌಹಾಣ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಕೊಠಡಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಕೊಠಡಿಯ ಬೀಗ ಒಡೆದು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದು, ಆರೋಪಿ ಅಂಕುರ್ ಚೌಹಾನ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News