×
Ad

ತೆಲಂಗಾಣ: ಕಾಂಗ್ರೆಸ್ ಸೇರ್ಪಡೆಯಾದ ಮತ್ತೊಬ್ಬ BRS ಶಾಸಕ

Update: 2024-07-07 12:35 IST

Photo:X/@INCTelangana

ಹೈದರಾಬಾದ್: ಭಾರತ್ ರಾಷ್ಟ್ರ ಸಮಿತಿ ಪಕ್ಷ(BRS)ವನ್ನು ತೊರೆದಿರುವ ಶಾಸಕ ಬಂದ್ಲಾ ಕೃಷ್ಣಮೋಹನ್ ರೆಡ್ಡಿ, ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಮಾರ್ಚ್ ತಿಂಗಳಿನಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ಏಳನೆಯ BRS ಶಾಸಕ ಅವರಾಗಿದ್ದಾರೆ.

ಗಡ್ವಾಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಂದ್ಲಾ ಕೃಷ್ಣಮೋಹನ್ ರೆಡ್ಡಿ, ಹೈದರಾಬಾದ್ ನಲ್ಲಿನ ಮುಖ್ಯಮಂತ್ರಿಗಳ ನಿವಾಸದಲ್ಲಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಬೆಳವಣಿಗೆಯ ನಂತರ 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ BRS ಪಕ್ಷದ ಶಾಸಕರ ಸಂಖ್ಯೆ 31ಕ್ಕೆ ಕುಸಿದಿದೆ. ಶಾಸಕರು ಪಕ್ಷವನ್ನು ತೊರೆಯುತ್ತಿರುವುದಲ್ಲದೆ, ಕಳೆದ ತಿಂಗಳು ನಡೆದ ಸಿಕಂದರಾಬಾದ್ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಎದುರು BRS ಪರಾಭವಗೊಂಡು ಹಿನ್ನಡೆ ಅನುಭವಿಸಿತ್ತು.

ಶುಕ್ರವಾರ ಚೆವೆಲ್ಲ ವಿಧಾನಸಭಾ ಕ್ಷೇತ್ರದ ಶಾಸಕ ಕಾಳೆ ಯಡ್ಡಯ್ಯ ಕೂಡಾ BRS ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಮಾರ್ಚ್ ತಿಂಗಳಿನಿಂದ BRS ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಇನ್ನಿತರ ಶಾಸಕರ ಪೈಕಿ ಕಡಿಯಂ ಶ್ರೀಹರಿ, ದಾನಂ ನಾಗೇಂದರ್, ತೆಲ್ಲಂ ವೆಂಕಟ್ ರಾವ್, ಪೊಚ್ಚರಮ್ ಶ್ರೀನಿವಾಸ್ ರೆಡ್ಡಿ ಹಾಗೂ ಸಂಜಯ್ ಕುಮಾರ್ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News