×
Ad

PEN ಪಿಂಟರ್ ಪ್ರಶಸ್ತಿಯನ್ನು ಈಜಿಪ್ಟ್ ಬರಹಗಾರ ಅಲಾ ಅಬ್ದುಲ್ ಫತ್ತಾಹ್ ಅವರೊಂದಿಗೆ ಹಂಚಿಕೊಂಡ ಅರುಂಧತಿ ರಾಯ್

Update: 2024-10-12 12:17 IST

Photo credit: www.englishpen.org

ಲಂಡನ್: 2024ರ ಇಂಗ್ಲೀಷ್ PEN ಪಿಂಟರ್ ಪ್ರಶಸ್ತಿಯನ್ನು ಅಲಾ ಅಬ್ದುಲ್ ಫತ್ತಾಹ್ ಅವರೊಂದಿಗೆ ಲೇಖಕಿ ಅರುಂಧತಿ ರಾಯ್ ಹಂಚಿಕೊಂಡಿದ್ದಾರೆ.

ಪ್ರತಿಷ್ಠಿತ ಬಹುಮಾನಕ್ಕೆ ತನ್ನ ಹೆಸರನ್ನು ಘೋಷಿಸುತ್ತಿದಂತೆ ಅರುಂಧತಿ ರಾಯ್ ತನ್ನ ಬಹುಮಾನದ ಮೊತ್ತವನ್ನು ಫೆಲೆಸ್ತೀನ್ ಮಕ್ಕಳ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಬ್ರಿಟೀಷ್- ಈಜಿಪ್ಟ್ ಬರಹಗಾರ ಅಲಾ ಅಬ್ದುಲ್ ಫತ್ತಾಹ್ ಅವರನ್ನು ಇಂಗ್ಲೀಷ್ PEN ಎಂಬ ಬರಹಗಾರರ ಸಂಘವು ʼ2024ರ PEN ಧೈರ್ಯವಂತ ಬರಹಗಾರʼ(PEN ರೈಟರ್ ಆಫ್ ಕರೇಜ್) ಎಂದು ಹೆಸರಿಸಿದೆ.

2024ರ PEN ಪಿಂಟರ್ ಪ್ರಶಸ್ತಿಯನ್ನು ಭಾರತೀಯ ಮೂಲದ ಬ್ರಿಟೀಷ್ ಲೇಖಕಿ ಅರುಂಧತಿ ರಾಯ್ ಪಡೆದುಕೊಂಡಿದ್ದಾರೆ. ಲಂಡನ್ ನ ಬ್ರಿಟೀಷ್ ಲೈಬ್ರರಿಯಲ್ಲಿ ನಡೆದ ಸಮಾರಂಭದಲ್ಲಿ ಅರುಂಧತಿ ರಾಯ್ ಅವರು ʼPEN ರೈಟರ್ ಆಫ್ ಕರೇಜ್ʼ ಪ್ರಶಸ್ತಿಗೆ ಅಲಾ ಅಬ್ದ್ ಎಲ್-ಫತ್ತಾಹ್ ಅವರ ಹೆಸರನ್ನು ಘೋಷಿಸಿದ್ದಾರೆ.

ಬ್ರಿಟೀಷ್-ಈಜಿಪ್ಟಿನ ಬರಹಗಾರ, ಸಾಫ್ಟ್ ವೇರ್ ಡೆವಲಪರ್ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಅಲಾ ಅಬ್ದುಲ್ ಫತ್ತಾಹ್ ಅವರು ಈಜಿಪ್ಟ್ ಜೈಲಿನಲ್ಲಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಅವರಿಗೆ ಜೈಲು ಶಿಕ್ಷೆ ಪೂರ್ಣವಾದರೂ ಅವರು ಇನ್ನು ಕೂಡ ಈಜಿಪ್ಟ್ ಜೈಲಿನಲ್ಲಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News