ದಲಿತರು, ಅಲ್ಪಸಂಖ್ಯಾತರು, ಓಬಿಸಿಗಳ ಬಗ್ಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಕಾಳಜಿಯಿಲ್ಲ : ಪ್ರಕಾಶ್ ಅಂಬೇಡ್ಕರ್ ಕಿಡಿ
ಪ್ರಕಾಶ್ ಅಂಬೇಡ್ಕರ್ | PTI
ಮುಂಬೈ: ವಂಚಿತ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಅವರು ಬುಧವಾರ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಉಭಯ ಪಕ್ಷಗಳೂ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ವಹಿಸಿಲ್ಲ. ಆದರೆ ಅವರ ಮತಗಳ ಬಗ್ಗೆ ಆಸಕ್ತಿ ಹೊಂದಿವೆ ಎಂದು ಟೀಕಿಸಿದ್ದಾರೆ.
ಮುಂಬೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಲಿತರು, ಮುಸ್ಲಿಮರು, ಆದಿವಾಸಿಗಲು ಹಾಗೂ ಓಬಿಸಿಗಳು ಕಾಂಗ್ರೆಸನ್ನು ನಂಬುವುದಿಲ್ಲ. ಲೋಕಸಭೆಯಲ್ಲಿ ರಾಹುಲ್‌ಗಾಂಧಿ ಮಾಡಿದ ಭಾಷಣದಲ್ಲಿ ಬಜೆಟನ್ನು ಸಿದ್ಧಪಡಿಸಿದ 20 ಮಂದಿಯ ಪೈಕಿ ಕೇವಲ ಓರ್ವ ಓಬಿಸಿ ಹಾಗೂ ಓರ್ವ ಅಲ್ಪಸಂಖ್ಯಾತ ಮಾತ್ರವೇ ಇದ್ದ ಬಗ್ಗೆ ರಾಹುಲ್‌ಗಾಂಧಿ ತಮ್ಮ ಕಳವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಸರಕಾರಗಳಲ್ಲಿ ಬಜೆಟನ್ನು ಸಿದ್ದಪಡಿಸಿದ ಅಧಿಕಾರಿಗಳಲ್ಲಿ ಎಷ್ಟು ಮಂದಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಓಬಿಸಿ ಅಧಿಕಾರಿಗಳು ಕಾಂಗ್ರೆಸ್ ಆಡಳಿತದಲ್ಲಿ ಬಜೆಟ್ ಸಿದ್ಧಪಡಿಸಿದ್ದಾರೆ ಎಂಬುದನ್ನು ರಾಹುಲ್ ಯಾಕೆ ಬೆಳಕು ಚೆಲ್ಲಿಲ್ಲವೆಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.
ಕಾಂಗ್ರೆಸ್‌ನ ನಕಲಿ ಪ್ರೇಮಕ್ಕೆ ದಲಿತರು, ಆದಿವಾಸಿಗಳು,ಮುಸ್ಲಿಮರು, ಓಬಿಸಿಗಳು ಮರುಳಾಗಲಾರರು ಎಂದು ಹೇಳಿದ ಅಂಬೇಡ್ಕರ್, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಒಂದೇ ಎಂದು ಹೇಳದರು.