×
Ad

ಅಸ್ಸಾಂ| ಬಿಜೆಪಿ ಕಾರ್ಯಕರ್ತರಿಂದ ಜೈರಾಮ್ ರಮೇಶ್ ಕಾರಿನ ಮೇಲೆ ದಾಳಿ; ಕಾಂಗ್ರೆಸ್ ಆರೋಪ

Update: 2024-01-21 18:35 IST

Screengrab:X/

ಗುವಾಹಟಿ: ಬಿಜೆಪಿ ಗುಂಪೊಂದು ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಆರೋಪಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಸ್ಸಾಂ ರಾಜ್ಯದಲ್ಲಿ ತನ್ನ ನಾಲ್ಕನೆ ದಿನದ ಯಾತ್ರೆಯನ್ನು ನಡೆಸುತ್ತಿರುವ ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು ಬಿಸ್ವಂತ್ ಜಿಲ್ಲೆಯಿಂದ ಸೋನಿತ್ಪುರ ಜಿಲ್ಲೆಯ ಮಾರ್ಗವಾಗಿ ನಾಗಾಂವ್ ಗೆ ತೆರಳುತ್ತಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಸಂವಹನ ಸಮನ್ವಯಕಾರ್ತಿ ಮಹಿಮಾ ಸಿಂಗ್, “ಜಾಮುಗುರಿಘಾಟ್ ಬಳಿ ಮುಖ್ಯ ಯಾತ್ರೆಯೊಂದಿಗೆ ಸೇರ್ಪಡೆಯಾಗಲು ಜೈರಾಮ್ ರಮೇಶ್ ಹಾಗೂ ಮತ್ತಿತರರಿದ್ದ ಕಾರು ತೆರಳುವಾಗ, ಅದರ ಮೇಲೆ ದಾಳಿ ನಡೆಸಲಾಗಿದೆ” ಎಂದು ತಿಳಿಸಿದ್ದಾರೆ.

“ನಾವು ಈ ಕುರಿತು ಪೊಲೀಸರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದು, ಅವರೀಗ ಸ್ಥಳದಲ್ಲಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಅವರು ನಮಗೆ ತೀವ್ರ ಬೆದರಿಕೆಯ ಸ್ಥಿತಿಯನ್ನು ಸೃಷ್ಟಿಸಿದರು. ಅವರು ವ್ಲಾಗರ್ ಕ್ಯಾಮೆರಾವನ್ನು ಮರಳಿಸಲು ನಿರಾಕರಿಸಿದ್ದು, ಆ ಕ್ಯಾಮೆರಾವನ್ನು ಕಸಿದುಕೊಂಡಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ” ಎಂದೂ ಅವರು ದೂರಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News