×
Ad

ಕಾರಣ ನೀಡದೆ ಉಪನ್ಯಾಸ ರದ್ದುಗೊಳಿಸಿದ ದಿಲ್ಲಿ ವಿ.ವಿ.: RJD ಸಂಸದ ಮನೋಜ್ ಝಾ ಆರೋಪ

Update: 2023-08-30 20:50 IST

 ಮನೋಜ್ ಝಾ | Photo: PTI 

ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾನಿಲಯ ಯಾವುದೇ ಕಾರಣ ನೀಡದೆ ತನ್ನ ಉಪನ್ಯಾಸವನ್ನು ರದ್ದುಗೊಳಿಸಿದೆ ಎಂದು ಆರ್ಜೆಡಿ ಸಂಸದ ಮನೋಜ್ ಝಾ ಅವರು ಬುಧವಾರ ಆರೋಪಿಸಿದ್ದಾರೆ. ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಅಧ್ಯಾಪಕರನ್ನು ಉದ್ದೇಶಿಸಿ ಸೆಪ್ಟಂಬರ್ 4ರಂದು ವೀಡಿಯೊ ಕಾನ್ಫರೆನ್ನಲ್ಲಿ ಭಾಷಣ ಮಾಡಲು ವಿಶ್ವವಿದ್ಯಾನಿಲಯದ ಸೆಂಟರ್ಫಾರ್ ಪ್ರೊಫೆಷನಲ್ ಡೆವಲಪ್ಮೆಂಟ್ ಇನ್ ಹೈಯರ್ ಎಜುಕೇಶನ್ ಆಗಸ್ಟ್ 18ರಂದು ಆಹ್ವಾನ ನೀಡಿತ್ತು ಎಂದು ಅವರು ಹೇಳಿದ್ದಾರೆ.

ಆದರೆ, ತನ್ನ ಉಪನ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ಇಂದು ಬೆಳಗ್ಗೆ ಇಮೇಲ್ ಮೂಲಕ ಮಾಹಿತಿ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ತಾನು ವಿಶ್ವವಿದ್ಯಾನಿಲಯಕ್ಕೆ ದೂರು ರವಾನಿಸಿದ್ದೇನೆ. ಈ ವಿಷಯವನ್ನು ಪ್ರಧಾನಿ ಮಂತ್ರಿ ಕಚೇರಿಯ ಗಮನಕ್ಕೆ ತರಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ದಿಲ್ಲಿ ವಿಶ್ವವಿದ್ಯಾನಿಲಯದ ಸಾಮಾಜಿಕ ಕಾರ್ಯ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಝಾ, ‘‘ಕೆಲವು ತಪ್ಪಿಸಿಕೊಳ್ಳಲಾಗದ ಸನ್ನಿವೇಶಗಳು ತನ್ನ ಭಾಷಣ ರದ್ದುಗೊಳಿಸಲು ಕಾರಣ’’ ಎಂದು ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News